ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧ ಜೆಪಿಸಿ ತನಿಖೆಗೆ ವಿರೋಧಿಸಲ್ಲ: ಪವಾರ್
ಅದಾನಿ ಸಮೂಹದ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ತೆಗೆದುಕೊಳ್ಳುತ್ತಿರುವ ನಿಲುವು ಅಚ್ಚರಿ ಮೂಡಿಸುತ್ತಿದ್ದು, ಈಗ ಶರದ್ ಪವಾರ್ ಕೇವಲ ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧದ ಜೆಪಿಸಿ ತನಿಖೆಯ ಆಗ್ರಹವನ್ನು ವಿರೋಧಿಸಲ್ಲ ಎಂದು ಹೇಳಿದ್ದಾರೆ.

ಮುಂಬೈ: ಅದಾನಿ ಸಮೂಹದ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ತೆಗೆದುಕೊಳ್ಳುತ್ತಿರುವ ನಿಲುವು ಅಚ್ಚರಿ ಮೂಡಿಸುತ್ತಿದ್ದು, ಈಗ ಶರದ್ ಪವಾರ್ ಕೇವಲ ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧದ ಜೆಪಿಸಿ ತನಿಖೆಯ ಆಗ್ರಹವನ್ನು ವಿರೋಧಿಸಲ್ಲ ಎಂದು ಹೇಳಿದ್ದಾರೆ.
ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿ ತನಿಖೆ ನಡೆವುದಕ್ಕೆ ಬಿಜೆಪಿ ವಿರೋಧಿ ಪಕ್ಷಗಳು ಮುಂದಿಡುತ್ತಿರುವ ಬೇಡಿಕೆಯನ್ನು ತಮ್ಮ ಪಕ್ಷ ಒಪ್ಪದೇ ಇದ್ದರೂ ವಿಪಕ್ಷಗಳ ಒಗ್ಗಟ್ಟಿನ ಕಾರಣಕ್ಕಾಗಿ ಬೇಡಿಕೆಯ ವಿರುದ್ಧ ಮಾತನಾಡುವುದಿಲ್ಲ ಎಂದು ಶರದ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂಡರ್ಬರ್ಗ್ ವಿವಾದದಲ್ಲಿ ಅದಾನಿ ಬೆನ್ನಿಗೆ ನಿಂತ ಪವಾರ್: ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ....
ಬಿಜೆಪಿಗೆ ಸಂಸತ್ ನಲ್ಲಿರುವ ಸಂಖ್ಯಾಬಲವನ್ನು ನೋಡಿದರೆ ಜಂಟಿ ಸದನ ಸಮಿತಿಗೆ ತನಿಖೆಗೆ ಆದೇಶಿಸಿದರೂ ಅದರ ಫಲಿತಾಂಶದ ಬಗ್ಗೆ ಶಂಕೆಗಳು ಮೂಡುತ್ತವೆ. ಜೆಪಿಸಿ ಕುರಿತು ನಮ್ಮ ಮಿತ್ರ ಪಕ್ಷಗಳ ಅಭಿಪ್ರಾಯಕ್ಕಿಂತ ನಮ್ಮ ಅಭಿಪ್ರಾಯ ಭಿನ್ನವಾಗಿದೆ. ಆದರೆ ನಾವು ನಮ್ಮ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಿದೆ. ಜೆಪಿಸಿ ತನಿಖೆ ಕುರಿತು ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ. ಆದರೆ ನಮ್ಮ ಸಹೋದ್ಯೋಗಿಗಳು, ಜೊತೆಗಾರರು ಜೆಪಿಸಿ ಕಡ್ಡಾಯವಾಗಿ ನಡೆಯಲೇಬೇಕೆಂದು ಭಾವಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಪವಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


