ACB

ಅರ್ಕಾವತಿ ಕೇಸ್‌ನಲ್ಲಿ ಜೈಲಿಗೆ ಹೋಗೋ ಭಯದಿಂದ ಲೋಕಾಯುಕ್ತ ಮುಚ್ಚಿ ಎಸಿಬಿ ತಂದಿದ್ದರು ಸಿದ್ದರಾಮಯ್ಯ: ಹೆಚ್.ವಿಶ್ವನಾಥ್
ಅರ್ಕಾವತಿ ಕೇಸ್'ನಲ್ಲಿ ಜೈಲಿಗೆ ಹೋಗುತ್ತೇನೆಂದು ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಂಎಲ್'ಸಿ ವಿಶ್ವನಾಥ್ ಅವರು ಆರೋಪಿಸಿದ್ದಾರೆ.

ಏಕಕಾಲದಲ್ಲಿ ಮೂರು ಜಿಲ್ಲೆಯಲ್ಲಿ ಎಸಿಬಿ ದಾಳಿ: ಮುಂದುವರೆದ ಶೋಧ
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸ, ಅವರ ಆಪ್ತರ ಮನೆಗಳ ಮೇಲೆ ಎಸಿಬಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಮೈಸೂರು, ಹಾಸನ ಮತ್ತು ಬೆಳಗಾವಿ ಜಿಲ್ಲಾದ್ಯಂತ 13 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ದಾಳಿ ಮಾಡಲಾಗಿದೆ.

ಅವಧಿಗೂ ಮುನ್ನ ಶಶಿಕಲಾ ಬಿಡುಗಡೆ: ಜೈಲಿನ ಸಿಡಿಯ ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿರುವ ಎಸಿಬಿ
ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರ ಅವಧಿಗೂ ಮುನ್ನ ಬಿಡುಗಡೆ ಸಂಬಂಧ ವಿನಯ್ ಕುಮಾರ್ ಆಯೋಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿ ನೀಡಿದ್ದು, ಎಫ್ ಎಸ್ ಎಲ್ ವರದಿಗಾಗಿ ಎಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ

ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಅಧಿಕಾರಿ: ಎಸಿಬಿಯಿಂದ ಮೂವರ ಬಂಧನ
ಪರವಾನಗಿ ನೀಡಲು ನಿವೃತ್ತ ಕಾರ್ಮಿಕ ಇನ್‌ಸ್ಪೆಕ್ಟರ್ ಶಿವಕುಮಾರ್ ಮತ್ತು ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ 1.80 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬುಧವಾರ ಎಸಿಬಿ ಬೆಲೆಗೆ ಬಿದ್ದಿದ್ದಾರೆ.

ಕೆಎಎಸ್ ಅಧಿಕಾರಿ ಸುಧಾ ನಿವಾಸದಿಂದ 3.7 ಕೆಜಿ ಚಿನ್ನ, 10.5 ಕೆಜಿ ಬೆಳ್ಳಿ ವಶ: ಎಸಿಬಿ ಐಜಿಪಿ ಚಂದ್ರಶೇಖರ್
ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿಗೊಳಗಾಗಿರುವ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ನಿವಾಸದಿಂದ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ಹೇಳಿದ್ದಾರೆ.

ರೂ.10 ಲಕ್ಷ ಹಣ ಬಿಡುಗಡೆಗೆ ರೂ.1.5 ಲಕ್ಷ ಲಂಚ: ಇಬ್ಬರು ಅಧಿಕಾರಿಗಳ ಬಂಧನ
ಚೆಕ್ ಡ್ಯಾಮ್ ಕಾಮಗಾರಿ ನಿರ್ವಹಿಸುವ ಲೋಕೋಪಯೋಗಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಗೆ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆ ಮಾಡಲು ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.

ಪರಪ್ಪನ ಅಗ್ರಹಾರ ಕೈದಿಯ ಪೆರೋಲ್ ಗೆ ಲಂಚ: ಜೈಲು ಅಧೀಕ್ಷಕ ಜಯರಾಮ್ ಎಸಿಬಿ ಬಲೆಗೆ
ಪರಪ್ಪನ ಅಗ್ರಹಾರದ ಕೈದಿಯೊಬ್ಬನಿಗೆ ಪೆರೋಲ್ ನೀಡಲು ಲಂಚ ಪಡೆಯುತ್ತಿದ್ದ ಕಾರಾಗೃಹದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ತೋಟಗಾರಿಕಾ ಸಹಾಯಧನ ಬಿಡುಗಡೆಗೆ ರೈತನಿಂದ ಲಂಚಕ್ಕೆ ಬೇಡಿಕೆ: ಸಹಾಯಕ ಅಧಿಕಾರಿ ಎಸಿಬಿ ಬಲೆಗೆ
ತೋಟಗಾರಿಕೆ ಬೆಳೆ ಬೆಳೆಯಲು ಸರ್ಕಾರದಿಂದ ಸಿಗುವ ಸಹಾಯಧನ ಮಂಜೂರು ರೈತರಿಂದ 14 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಗದಗ ಜಿಲ್ಲೆಯ ಮುಂಡರಗಿ ತೋಟಗಾರಿಕಾ ಸಹಾಯಕನೊಬ್ಬನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಗಂಗಾವತಿ: ಎಸಿಬಿ ಹೆಣೆದ 'ಮನಿಟ್ರ್ಯಾಪ್' ಬಲೆಗೆ ಮೂರು ತಿಂಗಳಲ್ಲಿ ಮೂರು ಅಧಿಕಾರಿಗಳು
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕೊಪ್ಪಳದ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹಾಗೂ ಅವರ ತಂಡ ಹೆಣೆದ ಮನಿಟ್ರ್ಯಾಪ್ ಬಲೆಗೆ ಇಲ್ಲಿನ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಮತ್ತು ಭೂಮಿ ಕೇಂದ್ರದ ಶಿರಸ್ತೇದಾರ ಶರಣಪ್ಪ ಬಿದ್ದಿದ್ದಾರೆ.

