ಅರ್ಕಾವತಿ ಕೇಸ್‌ನಲ್ಲಿ ಜೈಲಿಗೆ ಹೋಗೋ ಭಯದಿಂದ ಲೋಕಾಯುಕ್ತ ಮುಚ್ಚಿ ಎಸಿಬಿ ತಂದಿದ್ದರು ಸಿದ್ದರಾಮಯ್ಯ: ಹೆಚ್.ವಿಶ್ವನಾಥ್
ಅರ್ಕಾವತಿ ಕೇಸ್'ನಲ್ಲಿ ಜೈಲಿಗೆ ಹೋಗುತ್ತೇನೆಂದು ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಂಎಲ್'ಸಿ ವಿಶ್ವನಾಥ್ ಅವರು ಆರೋಪಿಸಿದ್ದಾರೆ.

ಬೆಂಗಳೂರು: ಅರ್ಕಾವತಿ ಕೇಸ್'ನಲ್ಲಿ ಜೈಲಿಗೆ ಹೋಗುತ್ತೇನೆಂದು ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಂಎಲ್'ಸಿ ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು. ಮತ್ತೆ ಅರ್ಕಾವತಿ ಕೇಸ್ ತೆರೆದರೆ ನೀವು ಎಲ್ಲಿರುತ್ತೀರೆಂದು ತಿಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆ ನನ್ನನ್ನು ಯಾವ ಕಾರಣಕ್ಕೆ ಸೋಲಿಸಿದಿರಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಯಾವ ಕಾರಣಕ್ಕೆ ಸೋಲು ಕಂಡೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಡೆಮಾಲಿಶ್ ಮಾಡಿಬಿಟ್ಟರು ಎಂದುಪ ಹೇಳಿದ್ದಾರೆ.
ಸದಾ ಬೆನ್ನಿಗೆ ಚೂರಿ ಇರೀತಿದ್ದವರಿಗೆ ಈ ನೋವು ಅರ್ಥವಾಗುತ್ತಿದೆ. ಬೇರೆಯವರ ಬೆನ್ನಿಗೆ ಚೂರಿ ಇರಿದು ಆನಂದ ಪಡುತ್ತಿದ್ದರು. ವಿಘ್ನ ಸಂತೋಷಿಗಳಾಗಿದ್ದವರಿಗೆ ಈಗ ನೋವಾಗುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ನಿಮ್ಮದು ಮಾತ್ರ ರಕ್ತ, ಮಾಂಸ, ಮೂಳೆ. ನಮ್ಮದು ತಗಡು ಅಥವಾ ಮರಾನಾ? ನೀವು ಚೂರಿ ಇರಿಯೂವಾಗ ಅದನ್ನು ಗಮನಿಸಲೂ ಇಲ್ಲ. ನಾವು ಎಂತಹ ನೋವು ಅನುಭವಿಸಿದೆವು ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಸಿದ್ದರಾಮಯ್ಯ ಚಾಮುಂಡೇಶ್ವರಿ ಬಿಟ್ಟು ಏಕೆ ಓಡಿ ಹೋದ್ರಿ? ನಿಮಗೆ ಸೋಲಿನ ಸುಳಿವು ತಿಳಿದ ಹಿನ್ನೆಲೆ ಓಡಿ ಹೋಗಿದ್ದೀರಿ. ನಿಮ್ಮ ಜನಪರ ಕಾರ್ಯ ಯೋಜನೆ ಏಕೆ ಕೈಹಿಡಿಯಲಿಲ್ಲ? ನೀವು ಚಾಮುಂಡೇಶ್ವರಿ ಕ್ಷೇತ್ರವನ್ನು ಕಡೆಗಣಿಸಿದ್ದೀರಿ. ನೀವು ಯಾರೋ ಕೆಲವು ಚಮಚಗಳ ಕೈಹಿಡಿದಿರಬಹುದು. ಅದಕ್ಕೆ ನೀವು ಬಾದಾಮಿ ಕ್ಷೇತ್ರದ ಕಡೆ ಮುಖ ಮಾಡಿದಿರಿ. ಯಾವ ಮತದಾರರೂ ನಿಮ್ಮನ್ನು ಸೋಲಿಸಲಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


