Lokayukta

'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!
ಸಾರ್ವಜನಿಕ ಸೇವಕರು ನೀಡುವ ಸೇವೆಗಳಿಗೆ ನಾಗರಿಕರು ಅವರಿಗೆ ಹಣ ಪಾವತಿಸುವುದು ಅವರ 'ಧರ್ಮ' (ಕರ್ತವ್ಯ) ಎಂದು ಸಚಿವರು ಪ್ರತಿಪಾದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತುಮಕೂರು: ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ!
30 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಂದಾಯ ನಿರೀಕ್ಷಕರೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

'ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ': ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು; ಸಚಿವರ ರಾಜಿನಾಮೆಗೆ ಒತ್ತಾಯ
ಕೆಲಸ ಆದ ನಂತರ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ ಎಂದು ಸಚಿವ ಶಿವಲಿಂಗೇಗೌಡ ಹೇಳಿಕೆ ನೀಡಿದ್ದು, ಈ ಮೂಲಕ ಅವ್ರು ನೇರವಾಗಿ ಲಂಚ ನೀಡುವಂತೆ ಜನರಿಗೆ ಸಲಹೆ ಕೊಟ್ಟಿದ್ದಾರೆ.

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ 50 ಲಕ್ಷ ರೂ ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!
ಲೋಕಾಯುಕ್ತ ಎಸ್.ಪಿ.ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ಮಾಡಿತು.ಈ ವೇಳೆ ದೂರುದಾರರು ಕೂಡ ಅವರ ಜೊತೆಗೆ ಇದ್ದರು.

ಗೃಹ ಸಚಿವರ ತವರಲ್ಲೇ ಲಂಚಬಾಕ ಪೊಲೀಸರು: ರೌಡಿಶೀಟರ್‌ನಿಂದ ಹಣ ಪಡೆಯುವಾಗ ಪೇದೆಗಳು ಲೋಕಾಯುಕ್ತ ಬಲೆಗೆ!
ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ಹಿಂಬದಿಯಲ್ಲೇ ಕಾನ್‌ಸ್ಟೆಬಲ್‌ಗಳು ಲಂಚ ಪಡೆಯುತ್ತಿದ್ದಾಗ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾನ್‌ಸ್ಟೆಬಲ್ ಪರಶುರಾಮ್ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಕಾನ್‌ಸ್ಟೆಬಲ್ ವೀರೇಶ ಪರಾರಿಯಾಗಿದ್ದಾರೆ

ದೊಡ್ಡಬಳ್ಳಾಪುರ ಮಾಜಿ ಸಹಾಯಕ ಆಯುಕ್ತೆಯಿಂದ ಅಕ್ರಮ: ದಾಖಲೆ ತಿರುಚಿ 62 ಎಕರೆ ಜಮೀನು ವರ್ಗಾವಣೆ
ಅಕ್ರಮಗಳ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ವಿದ್ಯುತ್ ಸಂಪರ್ಕ ನೀಡಲು ಲಂಚ: 1.50 ಲಕ್ಷ ರೂ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Bescom ಎಇಇ ನಾಗರತ್ನ
1.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ Bescom ಎಇಇ ಮತ್ತು ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹಂಪಿಯಲ್ಲಿ ಅಕ್ರಮ ಹೋಂಸ್ಟೇಗಳಿಗೆ ಅನುಮತಿ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ದಾಖಲು
ಗಂಗಾವತಿಯ HWHAMA ಮತ್ತು ಪ್ರವಾಸಿ ಸ್ಥಳಗಳಲ್ಲಿ ಮಾದಕ ದ್ರವ್ಯಗಳ ಭೀತಿ ಮತ್ತು ಅಕ್ರಮ ಮದ್ಯ ಮಾರಾಟದ ದೂರುಗಳನ್ನು ಉಪ ಲೋಕಾಯುಕ್ತರು ಸ್ವೀಕರಿಸಿದ್ದಾರೆ.

ಮೈಸೂರು: 5.50 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ
5.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

