ಅವಧಿಗೂ ಮುನ್ನ ಶಶಿಕಲಾ ಬಿಡುಗಡೆ: ಜೈಲಿನ ಸಿಡಿಯ ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿರುವ ಎಸಿಬಿ
ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರ ಅವಧಿಗೂ ಮುನ್ನ ಬಿಡುಗಡೆ ಸಂಬಂಧ ವಿನಯ್ ಕುಮಾರ್ ಆಯೋಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿ ನೀಡಿದ್ದು, ಎಫ್ ಎಸ್ ಎಲ್ ವರದಿಗಾಗಿ ಎಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ

ಬೆಂಗಳೂರು: ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರ ಅವಧಿಗೂ ಮುನ್ನ ಬಿಡುಗಡೆ ಸಂಬಂಧ ವಿನಯ್ ಕುಮಾರ್ ಆಯೋಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿ ನೀಡಿದ್ದು, ಎಫ್ ಎಸ್ ಎಲ್ ವರದಿಗಾಗಿ ಎಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಶಶಿಕಲಾ ಮತ್ತು ಅವರ ನಾದಿನಿ ಇಳವರಿಸಿಯನ್ನು 2017 ರಿಂದ ಬೆಂಗಳೂರು ಕಾರಾಗೃಹದಲ್ಲಿರಿಸಲಾಗಿದೆ. ವಿನಯ್ ಕುಮಾರ್ ಕಮಿಟಿ ಸಲ್ಲಿಸಿರುವ ಮೂರು ಸಿಡಿಗಳನ್ನು ಎಸಿಬಿ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ನೀಡಿದೆ. ಶಶಿಕಲಾಗೆ ಸಂಬಂಧಿಸಿದಂತೆ ಜೈಲಿನಲ್ಲಿ ನಡೆದಿರುವ ವಿಷಯಗಳ ಸಂಬಂಧ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಒಂದು ಸಿಡಿಯ ಎಫ್‌ಎಸ್‌ಎಲ್ ವರದಿಯನ್ನು ಸ್ವೀಕರಿಸಿದ್ದು ಮತ್ತು ಎರಡರ ವರದಿಯನ್ನು ಶೀಘ್ರವಾಗಿ ನೀಡುವಂತೆ ಸೂಚಿಸಿದೆ, ವಿನಯ್ ಕುಮಾರ್ ಆಯೋಗದ ವರದಿಯು ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ ಮತ್ತು ಅಂದಿನ ಕೆಲವು ಜೈಲು ಅಧಿಕಾರಿಗಳಿಂದ ದಾಖಲೆಗಳನ್ನು ಸುಳ್ಳು ಎಂದು ಆರೋಪಿಸಲಾಗಿದ್ದು ಆಯೋಗ ಸಲ್ಲಿಸಿರುವ ವರದಿಯನ್ನು ಸರ್ಕಾರ ಗೌಪ್ಯವಾಗಿರಿಸಿದೆ.
ಅವಧಿಗೂ ಮುನ್ನ ಶಶಿಕಲಾ ಬಿಡುಗಡೆ ಕೋರಿರುವುದರ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಿರ್ಣಾಯಕವಾಗಲಿದೆ. ಜನವರಿ 27 ರಂದು ಶಶಿಕಲಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ತಮ್ಮ ಒಳ್ಳೆಯ ನಡತೆ ಆಧರಿಸಿ ಅವಧಿಗೂ ಮುನ್ನ ರಿಲೀಸ್ ಮಾಡುವಂತೆ ಶಶಿಕಲಾ ಮನವಿ ಮಾಡಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆಗೊಳಗಾದ ಖೈದಿಗಳು ನಿಯಮಿತ ಜೈಲು ಮಾನದಂಡಗಳ ಅಡಿಯಲ್ಲಿ ಉತ್ತಮ ನಡವಳಿಕೆಯ ಆಧಾರದ ಮೇಲೆ ಬಿಡುಗಡೆಯಾಗಲು ಅವಕಾಶವಿಲ್ಲ. ಕಾರಾಗೃಹ ಇಲಾಖೆ ಡಿಐಜಿ ರೂಪಾ ಅವರು ತಮ್ಮ ಮೊದಲ ಭೇಟಿಯ ವೇಳೆ ಜೈಲಿನಲ್ಲಿ ಹಲವು ಅಕ್ರಮಗಳ ಬಗ್ಗೆ ಸಲ್ಲಿಸಿದ್ದ ವಿಡಿಯೋ ಮತ್ತು ಫೋಟೋಗಳು ಕೂಡ ಸಿಡಿಯಲ್ಲಿವೆ.
ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು 2017 ರಲ್ಲಿ ಡಿ ರೂಪಾ ಹಲವು ಗಂಭೀರ ಆರೋಪ ಮಾಡಿದ್ದರು, ಜೈಲು ಅಧಿಕಾರಿಗಳು ಬಹುಕೋಟಿ ಸ್ಟಾಂಪ್ ಹಗರಣದ ಕರೀಂ ತೆಲಗಿ ಸೇರಿದಂತೆ ಹಲವರಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆಂದು ರೂಪಾ ಆರೋಪ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


