ಹಿಂದೂಸ್ತಾನ್ ಟರ್ಬೋ ಟ್ರೈನರ್-40 ತರಬೇತಿ ವಿಮಾನ ಸೇನೆಗೆ ಸೇರ್ಪಡೆ
ವಾಯುಸೇನೆಯ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಹೆಚ್ ಎಎಲ್) ತಯಾರಿಸಿದ್ದ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ...

ಬೆಂಗಳೂರು: ವಾಯುಸೇನೆಯ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಹೆಚ್ ಎಎಲ್) ತಯಾರಿಸಿದ್ದ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನ ಎಚ್ ಎಎಲ್ ನಲ್ಲಿರುವ ರಕ್ಷಣಾ ವಿಭಾಗದ ವಿಮಾನ ನಿಲ್ದಾಣದಲ್ಲಿ ಇಂದು ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು HTT-40 ವಿಮಾನವನ್ನು ಲೋಕಾರ್ಪಣೆ ಮಾಡಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿರುವ ಈ ಲಘು ವಿಮಾನ ಇನ್ನು ಭಾರತೀಯ ವಾಯುಸೇನೆಯ ಯೋಧರ ತರಬೇತಿಗೆ ಲಭ್ಯವಾಗಲಿದೆ.
ಸುಮಾರು 2,800 ಕೆಜಿ ತೂಕದ ಈ ಲಘು ವಿಮಾನ, 950ಎಸ್ ಹೆಚ್ ಪಿ ಕ್ಲಾಸ್ ಟರ್ಬೋ ಪ್ರಾಪ್ ಎಂಜಿನ್ ಹೊಂದಿದೆ. ವಾಯುಸೇನೆಯ ಪೈಲಟ್ ಗಳ ತರಬೇತಿಗಾಗಿ ಸೂಕ್ತ ವಿಮಾನದ ಬೇಡಿಕೆ ಇಟ್ಟಿದ್ದ ವಾಯುಸೇನೆಗೆ ಆಗಸ್ಟ್ 2013ರಲ್ಲಿ ಎಚ್ ಎಎಲ್ ಸಂಸ್ಥೆ ವಿಮಾನದ ಡಿಸೈನ್, ತಾಂತ್ರಿಕತೆ ಕುರಿತಂತೆ ಹೆಚ್ ಎಎಲ್ ಮಾಹಿತಿ ನೀಡಿತ್ತು. ಎಚ್ ಎಎಲ್ ನ ಈ ಮಾದರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿದ್ದಂತೆಯೇ 2015ರ ಮೇ ತಿಂಗಳಲ್ಲಿ ವಿಮಾನದ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು.
ವಿಮಾನದ ನಿರ್ಮಾಣ ಕಾರ್ಯ ಪೂರ್ಣಗೊಂಡು ಮೇ 31ರಂದು ಈ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಅಂದು ಅಭೂತಪೂರ್ವ ಯಶಸ್ಸು ಕಂಡಿದ್ದ ಈ ವಿಮಾನವನ್ನು ಇಂದು ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಭಾರತೀಯ ವಾಯುಸೇನೆ ಇಂತಹ 70 ವಿಮಾನಗಳಿಗೆ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿ ವಾಯುಸೇನೆಯ ಬೇಡಿಕೆ ಈಡೇರಿಸುವುದಾಗಿ ಎಚ್ ಎಎಲ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


