ಔಷಧ ಕೊರತೆ ಒಪ್ಪಿದ ಸರ್ಕಾರ
ಬೆಂಗಳೂರಿನ ದೊಡ್ಡಾಸ್ಪತ್ರೆಗಳಿಗೆ ಔಷಧಗಳ ಪೂರೈಕೆ ಆಗದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ವ್ಯಾಪ್ತಿಯ ಸೂಪರ್ ಸ್ಪೆಷಾಲಿಟಿ (ಪಿಎಂಎಸ್‍ಎಸ್ ವೈ) ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ, ವಿಂಟೋ ಆಸ್ಪತ್ರೆಗಳಿಗೆ 296 ಔಷಧಗಳ...

ವಿಧಾನಪರಿಷತ್ತು: ಬೆಂಗಳೂರಿನ ದೊಡ್ಡಾಸ್ಪತ್ರೆಗಳಿಗೆ ಔಷಧಗಳ ಪೂರೈಕೆ ಆಗದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ವ್ಯಾಪ್ತಿಯ ಸೂಪರ್ ಸ್ಪೆಷಾಲಿಟಿ (ಪಿಎಂಎಸ್‍ಎಸ್ ವೈ) ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ, ವಿಂಟೋ ಆಸ್ಪತ್ರೆಗಳಿಗೆ 296 ಔಷಧಗಳ ಪೂರೈಕೆಯಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನಗರದ ದೊಡ್ಡ ಆಸ್ಪತ್ರೆಗಳಲ್ಲೇ ಜೀವರಕ್ಷಕ ಔಷಧಗಳಿಲ್ಲ ಎಂದು ಪ್ರಕಟಿಸಿದ್ದ ವರದಿಯನ್ನು ಕಳೆದ ವಾರ ಸದನದಲ್ಲಿ ಬಿಜೆಪಿಯ ವೈ.ನಾರಾಯಣಸ್ವಾಮಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ತಡವಾಗಿ, ಗುರುವಾರ ಸದನದಲ್ಲಿ ಉತ್ತರ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಆಸ್ಪತ್ರೆಗಳಿಗೆ ಔಷಧ ಪೂರೈಕೆ ಆಗದಿರುವುದನ್ನು ಒಪ್ಪಿಕೊಂಡಿದ್ದಾರೆ.
ಸಚಿವರು ಬಿಎಂಸಿ ವ್ಯಾಪ್ತಿಯ ಯಾವುದೇ ಆಸ್ಪತ್ರೆಗಳಲ್ಲೂ ಔಷಧ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಹಾಗೆಯೇ ವಿಕ್ಟೋರಿಯಾ, ವಾಣಿವಿಲಾಸ್, ಬೌರಿಂಗ್, ವಿಂಟೋ ಹಾಗೂ ಸೂಪರ್ ಸ್ಪೆಷಾಲಿಟಿ (ಪಿಎಂಎಸ್‍ಎಸ್‍ವೈ) ಆಸ್ಪತ್ರೆಗಳಲ್ಲಿರುವ ಔಷಧಗಳ ಸಂಖ್ಯೆಯನ್ನು ನೀಡಿದ್ದಾರೆ. ಜತೆಗೆ ಯಾವೆಲ್ಲಾ ಔಷಧಗಳಿವೆ ಎಂದು ವಿವರಣೆ ನೀಡಿದ್ದಾರೆ. ಆದರೆ, ನೀಡಿರುವ
ವಿವರದಲ್ಲಿ ವಿಕ್ಟೋರಿಯಾ ಹೊರತುಪಡಿಸಿದರೆ ಉಳಿದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇರುವುದು ಸ್ಪಷ್ಟವಾಗುತ್ತದೆ. ಅದರಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ
ತೀವ್ರವಾಗಿರುವ ಚಿತ್ರಣವನ್ನೇ ತೋರಿಸಿದ್ದಾರೆ.
2014ರಲ್ಲಿ ಕೈಗೊಂಡ ತೀರ್ಮಾನದಂತೆ ಡ್ರಗ್ ಲಾಜಿಸ್ಟಿಕ್ ಸೊಸೈಟಿಯಿಂದ ಔಷಧ ಪಡೆಯಲು ಪಟ್ಟಿ ಸಲ್ಲಿಸಲಾಗಿತ್ತು. ಅದರಂತೆ ಟೆಂಡರ್ ಪ್ರಕ್ರಿಯೆ ನಡೆದು 256 ಔಷಧಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗಿದೆ. ಆನಂತರ 296 ಔಷಧಗಳಿಗೆ ಸಂಬಂಧಿಸಿದಂತೆ ಟೆಂಡರ್ ನಡೆಸಲಾಗಿದೆ. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಎರಡು ಬಾರಿ ಟೆಂಡರ್ ಮಾಡುವುದಾಗಿ ಡ್ರಗ್ ಲಾಜಿಸ್ಟಿಕ್ ಸೊಸೈಟಿ ಹೇಳಿದೆ. ಹೀಗಾಗಿ ಇನ್ನೂ ಔಷಧ ಪೂರೈಕೆಯಾಗಿಲ್ಲ. ಇನ್ನು ಲ್ಯಾಬ್ ರಿಜೆಂಟ್ಸ್‍ಗಳಿಗೆ ಅಗತ್ಯ ಅನುದಾನವಿದ್ದು, ರೆಂಟಾಲ್ ಆಧಾರದಲ್ಲಿ ಪಡೆದುಕೊಳ್ಳಲಾಗುತ್ತಿದೆ. ಪೂರೈಕೆಯಾಗದಿದ್ದರೆ ಎಲ್‍ಎಫ್ ಟಿ, ಆರ್‍ಎಫ್ ಟಿ ಮತ್ತು ಸಿಬಿಸಿಗಳ ವ್ಯತ್ಯಯವಾಗುತ್ತದೆ. ಇನ್ನುಳಿದ ಪರೀಕ್ಷೆಗಳ ಎಂದಿನಂತೆ ನಡೆಯುತ್ತಿವೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


