assembly

"ಹೊರಗಿನ ಬರಗಾಲ ಚರ್ಚಿಸಲು ಬಂದರೆ, ಸದನದಲ್ಲೇ ಶಾಸಕರ ಬರಗಾಲ": ಅನಂತ್ ನಾಗ್ 'ಅಭಿನಂದನಾ ನುಡಿ' ವೇಳೆ ಬೆಂಚುಗಳು ಖಾಲಿ; ಪ್ರತಿಪಕ್ಷಗಳ ಲೇವಡಿ..!
ಕನ್ನಡ ಚಿತ್ರರಂಗದ ಧ್ರುವತಾರೆ, ಮಾಜಿ ಸಚಿವರೂ ಆಗಿರುವ ಅನಂತ್ ನಾಗ್ ಅವರಂತಹ ಹಿರಿಯ ಚೇತನಕ್ಕೆ ಇಂತಹ ಖಾಲಿ ಸದನದಲ್ಲಿ ಅಭಿನಂದನೆ ಸಲ್ಲಿಸುವುದು ಅವರಿಗೆ ಮಾಡುವ ಅಪಮಾನ. ಆಡಳಿತ ಪಕ್ಷದ ಶಾಸಕರಿಗೆ ಕನಿಷ್ಠ ಗೌರವವೂ ಇಲ್ಲವೇ?

ಸವದಿ v/s ಸವದಿ: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ರೈತರಿಗೆ ಕರೆಂಟ್ ಕೊಡುವಂತೆ ಒತ್ತಾಯ!
ವಿದ್ಯುತ್ ಪೂರೈಕೆಯಲ್ಲಿನ ಕೊರತೆಯಿಂದಾಗಿ ರೈತರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ ಸಿದ್ದು ಸವದಿ, ಸರ್ಕಾರವು ಖಾತರಿ ಯೋಜನೆಗಳನ್ನು ನಿಲ್ಲಿಸಿ, ಆ ಹಣವನ್ನು ರೈತರಿಗೆ ವಿದ್ಯುತ್ ಒದಗಿಸಲು ಬಳಸಬೇಕೆಂದು ಆಗ್ರಹಿಸಿದರು.

BPL ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಸರ್ಕಾರ ಚಿಂತನೆ: ಸಚಿವ ರಿಜ್ವಾನ್ ಅರ್ಷದ್
ರದ್ದುಗೊಂಡಿರುವ ಬಿಪಿಎಲ್ ಕಾರ್ಡ್‌ಗಳನ್ನು ಮರುಪರಿಶೀಲಿಸಿ, ಅರ್ಹ ಫಲಾನುಭವಿಗಳು ತಮ್ಮ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಹಾಗೂ ನಕಲಿ ಕಾರ್ಡ್‌ಗಳು, ಅನರ್ಹ ಫಲಾನುಭವಿಗಳು ಮತ್ತು ಇತರ ಅಕ್ರಮಗಳನ್ನು ಪತ್ತೆಹಚ್ಚಲು ಇಲಾಖೆಗೆ ಸೂಚಿಸಲಾಗಿದೆ ಎಂದು ಅರ್ಷದ್ ತಿಳಿಸಿದರು.

ವಿಧಾನಸಭೆ, ವಿಧಾನಪರಿಷತ್‌ನಲ್ಲಿ 7,043 ಕೋಟಿ ರೂ ಪೂರಕ ಬಜೆಟ್ ಅಂದಾಜುಗಳಿಗೆ ಅಂಗೀಕಾರ
ಇದರಲ್ಲಿ 4,324.35 ಕೋಟಿ ರೂಪಾಯಿ ರಾಜಸ್ವ ವೆಚ್ಚಕ್ಕೆ ಹಾಗೂ 2,718.35 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.

ಸದನ ನುಂಗಿದ ನಾಗೇಂದ್ರ: 3 ದಿನ ಮುನ್ನವೇ ಅಧಿವೇಶನ ಮೊಟಕು; ರಾತ್ರಿಯಿಡೀ ಧರಣಿ ನಡೆಸುವ ವಿಪಕ್ಷಗಳ ಯೋಜನೆಗೆ ತಣ್ಣೀರು!
ದಿನದ ಆರಂಭದಲ್ಲಿ, ಬರ ಮತ್ತು ಜ್ವಲಂತ ವಿಷಯಗಳ ಕುರಿತು ಚರ್ಚೆಯಲ್ಲಿ ವಿರೋಧ ಪಕ್ಷದ ಶಾಸಕರು ಭಾಗವಹಿಸಬೇಕೆಂದು ಸಚಿವರು ಒತ್ತಾಯಿಸಿದರು. ಬಿಜೆಪಿ ಸದಸ್ಯರು ನಾಗೇಂದ್ರ ರಾಜೀನಾಮೆ ನೀಡುವವರೆಗೆ ತಾವು ಕದಲುವುದಿಲ್ಲ ಎಂದು ಒತ್ತಾಯಿಸಿ ಪ್ರಸ್ತಾಪವನ್ನು ತಿರಸ್ಕರಿಸಿದರು.

ಬರ ಪರಿಸ್ಥಿತಿ ಚರ್ಚೆ ಬದಲು ರಾಜಕೀಯಕ್ಕೆ ವಿಪಕ್ಷಗಳ ಆದ್ಯತೆ, ರಾಜ್ಯದ ಜನತೆಗೆ ದ್ರೋಹ: ಸಿಎಂ ಅಸಮಾಧಾನ
ನನಗೆ ಯಾವುದೇ ಸಂಕೋಚ ಅಥವಾ ದ್ವೇಷವಿಲ್ಲ. ಎಲ್ಲರೂ ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡೋಣ ಎಂದು ಹೇಳಿದ್ದೆ. ಚುನಾವಣೆ ಬಂದಾಗ ಚುನಾವಣೆ ಮಾಡೋಣ,

ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041'; ಸರ್ಕಾರದ ಅನುಮೋದನೆ!
ವಿಧಾನಸಭೆಯಲ್ಲಿಂದು ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961ರ ಅಡಿಯಲ್ಲಿ ಈ ಅನುಮೋದನೆಯನ್ನು ನೀಡಲಾಗಿದೆ.

'ನಮಸ್ತೇ ಸದಾ ವತ್ಸಲೇ' ಹೇಳಿ ಇಷ್ಟೆಲ್ಲಾ ಬದಲಾವಣೆ ಆದ್ರಿ: ನೀವು CM ಸ್ಥಾನಕ್ಕೆ ಸೆಟ್ ಆಗ್ತಿಲ್ಲ, ಜಿ. ಪರಮೇಶ್ವರ್ ಗೆ ಕೊಟ್ಟು ವೇದಾಂತಿ ಆಗಿಬಿಡಿ'
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಉಪ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಮಾತನಾಡುವ ಸಂದರ್ಭದಲ್ಲಿ, ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಸದನದಲ್ಲಿ ಸ್ವಾರಸ್ಯಕರ ಮಾತುಕತೆ ನಡೆಯಿತು.

ತಪ್ಪು ಸಾಬೀತಾದರೆ ರಾಜೀನಾಮೆಗೆ ಸಿದ್ಧ, ಮೃತರು ಬೇಟೆಗಾರರೆಂದು ದೃಢಪಟ್ಟರೆ ಪರಿಹಾರವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ
ಸದ್ಯ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಈ ಅಧಿವೇಶನ ಇನ್ನೂ ಎರಡು ವಾರಗಳ ಕಾಲ ನಡೆಯಲಿದೆ. ವರದಿಯನ್ನು ಸದನದಲ್ಲಿ ಮಂಡಿಸುತ್ತೇವೆ.

