ವಿಧಾನಸಭೆ, ವಿಧಾನಪರಿಷತ್‌ನಲ್ಲಿ 7,043 ಕೋಟಿ ರೂ ಪೂರಕ ಬಜೆಟ್ ಅಂದಾಜುಗಳಿಗೆ ಅಂಗೀಕಾರ
ಇದರಲ್ಲಿ 4,324.35 ಕೋಟಿ ರೂಪಾಯಿ ರಾಜಸ್ವ ವೆಚ್ಚಕ್ಕೆ ಹಾಗೂ 2,718.35 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.

ಬೆಂಗಳೂರು: 2026-27ನೇ ಸಾಲಿನ ಪೂರಕ ಬಜೆಟ್ ಅಂದಾಜುಗಳ ಮೊದಲ ಕಂತನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು. ಒಟ್ಟು 7,042.69 ಕೋಟಿ ರೂಪಾಯಿ ಮೊತ್ತದ ಈ ಪೂರಕ ಬಜೆಟ್‌ನಲ್ಲಿ 4,324.35 ಕೋಟಿ ರೂಪಾಯಿ ರಾಜಸ್ವ ವೆಚ್ಚಕ್ಕೆ ಹಾಗೂ 2,718.35 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.
ಪೂರಕ ಅಂದಾಜುಗಳಲ್ಲಿ ‘ವಿಕಸಿತ ಭಾರತ — ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆಗೆ 2,918 ಕೋಟಿ ರೂಪಾಯಿ, ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗೆ ಮೂಲಸೌಕರ್ಯ ಬಂಡವಾಳವಾಗಿ 1,000 ಕೋಟಿ ರೂಪಾಯಿ, ಭಾರತ್ ಜೋಡೋ ಯುವ ಕ್ಲಬ್‌ಗಳಿಗೆ 781 ಕೋಟಿ ರೂಪಾಯಿ, ಅಮೃತ್ (AMRUT) ಯೋಜನೆಯಡಿ 708 ಕೋಟಿ ರೂಪಾಯಿ ಹಾಗೂ ಬರಪೀಡಿತ ಜನರಿಗೆ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನೆಯಡಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂಪಾಯಿ, ಒಟ್ಟು 289 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ.
ಇತರೆ ಯೋಜನೆಗಳ ಪೈಕಿ ರಸ್ತೆ ಸಾರಿಗೆ ನಿಗಮಗಳಿಗೆ ಸರ್ಕಾರಿ ಮೋಟಾರು ವಾಹನ ತೆರಿಗೆ ಪಾಲಿನ ಪರಿಷ್ಕರಣೆಗೆ 193.61 ಕೋಟಿ ರೂಪಾಯಿ, ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ಗೆ 152.72 ಕೋಟಿ ರೂಪಾಯಿ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಕ್ಕೆ 93 ಕೋಟಿ ರೂಪಾಯಿ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 91 ಕೋಟಿ ರೂಪಾಯಿ, ಕೆಕೆಆರ್‌ಟಿಸಿ ಬಸ್‌ಗಳ ಖರೀದಿಗೆ 76 ಕೋಟಿ ರೂಪಾಯಿ ಹಾಗೂ ಇತರೆ ಯೋಜನೆಗಳಿಗೆ 738 ಕೋಟಿ ರೂಪಾಯಿ ಮೀಸಲಿಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



