ಅಮೆರಿಕ, ಫ್ರಾನ್ಸ್ ಗೆ ದೇಶಪಾಂಡೆ
ವಿಶ್ವ ಬಂಡವಾಳ ಹೂಡಿಕೆದಾರರ `ಇನ್ ವೆಸ್ಟ್ ಕರ್ನಾಟಕ2016'ರ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸುವ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ದೇಶಪಾಂಡೆ ನೇತೃತ್ವದ ಉನ್ನತ ಮಟ್ಟದ ನಿಯೋಗ ಅಮೆರಿಕ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಿದೆ...

ಬೆಂಗಳೂರು: ವಿಶ್ವ ಬಂಡವಾಳ ಹೂಡಿಕೆದಾರರ `ಇನ್ ವೆಸ್ಟ್ ಕರ್ನಾಟಕ2016'ರ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸುವ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ದೇಶಪಾಂಡೆ ನೇತೃತ್ವದ ಉನ್ನತ ಮಟ್ಟದ ನಿಯೋಗ ಅಮೆರಿಕ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಿದೆ.
ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ಜೊತೆಗೆ, ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ವಿಶ್ವಾಸವನ್ನು ಹೂಡಿಕೆದಾರರಿಗೆ ನೀಡಿದೆ. ಇದರ ಅಂಗವಾಗಿ ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿ, ಇನ್‍ವೆಸ್ಟ್ ಕರ್ನಾಟಕ2016ರ ಬಗ್ಗೆ ಮಾಹಿತಿ ನೀಡಲಾಯಿತು. ಮೂಲಸೌಲಭ್ಯ ವಲಯದಲ್ಲಿ ಒಡಂಬಡಿಕೆ ವಿಚಾರವಾಗಿ ನಿಯೋಗವು ಚರ್ಚೆ ನಡೆಸಿತು. ಸ್ಯಾನ್ ಫ್ರಾನ್ಸಿಸ್ಕೋದ ಮೇಯರ್ ಎಡ್ವಿನ್ ಲೀರನ್ನು ಇನ್‍ವೆಸ್ಟ್ ಕರ್ನಾಟಕಕ್ಕೆ ಆಹ್ವಾನಿಸಿತು.
ಕಲೆ, ಸಂಸ್ಕೃತಿ ಮತ್ತು ವಸ್ತು ಸಂಗ್ರಹಾಲಯ ಕ್ಷೇತ್ರದ ತಂತ್ರಜ್ಞಾನ ಅಳವಡಿಕೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವೆ ಸಹಕಾರ ಒಪ್ಪಂದ ಹಾಗೂ ಸೋದರ ನಗರ ಬಾಂಧವ್ಯ ಸಹಕಾರ ಒಡಂಬಡಿಕೆ ಪತ್ರಕ್ಕೆ ನಿಯೋಗದ ನೇತೃತ್ವ ವಹಿಸಿದ್ದ ಸಚಿವ ದೇಶ ಪಾಂಡೆ ಸಮ್ಮುಖದಲ್ಲಿ ಸಹಿ ಮಾಡಲಾಗಿದೆ. ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಕೈಗಾರಿಕಾಭಿವೃದ್ಧಿ ಆಯುಕ್ತ ಗೌರವ್‍ಗುಪ್ತ, ಎಫ್ ಕೆಸಿಸಿಐ ಪ್ರತಿನಿಧಿಗಳಾದ ಸಂಪತ್‍ರಾಮನ್, ಎಂ.ಸಿ. ದಿನೇಶ್, ರವಿಕುಮಾರ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


