'ಬರೀ ಸುಳ್ಳು.. ನಿಮ್ಮಿಂದಾಗಿ ಹೊಟೆಲ್ ನಲ್ಲಿ ಪಾತ್ರೆ ತೊಳೆಯಬೇಕಾಯಿತು': ಪಾಕ್ ವಿರುದ್ಧ ನಾಯಕ Shakeel Ammad Butt ಕಿಡಿ!
ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಗಿತ್ತು.

ಲಾಹೋರ್: ಆಸ್ಟ್ರೇಲಿಯಾಗೆ ತೆರಳಿ ಅಲ್ಲಿನ ಹೊಟೆಲ್ ಬಿಲ್ ಕಟ್ಟಲಾಗದೇ ಪರದಾಡಿ ಕೊನೆಗೂ ಸ್ವದೇಶಕ್ಕೆ ಮರಳಿರುವ ಪಾಕಿಸ್ತಾನ ಹಾಕಿ ತಂಡ ತನ್ನ ಮಂಡಳಿ ವಿರುದ್ಧ ಕೆಂಡಾಮಂಡಲವಾಗಿದೆ.
ಹಾಕಿ ಟೂರ್ನಿಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಪಾಕಿಸ್ತಾನ ಹಾಕಿ ತಂಡಕ್ಕೆ ತೀವ್ರ ಮುಜುಗರದ ಪರಿಸ್ಥಿತಿ ಏರ್ಪಟ್ಟಿತ್ತು. ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಗಿತ್ತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.
ಆರ್ಥಿಕ ಮುಗ್ಗಟ್ಟಿನ ಕಾರಣ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸಿರಲಿಲ್ಲ. ತಂಡ ಮತ್ತು ಸಿಬ್ಬಂದಿ ಕಳೆದ ವಾರ ಆಸ್ಟ್ರೇಲಿಯಾಕ್ಕೆ ಹೊರಟಾಗ ಕೆನ್‌ಬೆರಾದಲ್ಲಿ ಬುಕ್ ಮಾಡಲಾಗಿದ್ದ ಫೋರ್‌ಸ್ಟಾರ್ ಹೋಟೆಲ್‌ಗೆ ಪಾಕಿಸ್ತಾನದ ಕ್ರೀಡಾ ಮಂಡಳಿ ಮತ್ತು ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸಲಿದೆ ಎಂದು ಹೇಳಲಾಗಿತ್ತು. ಆದರೆ ಹಣ ಪಾವತಿಸದ ಕಾರಣ ಬೀದಿಬದಿ ಓಡಾಡಿ ಸಮಯ ಕಳೆದರು ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ. ಕೊನೆಗೂ ತಂಡಕ್ಕೆ ಅಲ್ಲಿ ವ್ಯವಸ್ಥೆ ಮಾಡಲಾಯಿತು.
ಹರಸಾಹಸದ ಬಳಿಕ ಸ್ವದೇಶಕ್ಕೆ ವಾಪಸ್
ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಮ್ಮದ್ ಬಟ್ ಇಂದು ಬೆಳಿಗ್ಗೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ತಮ್ಮದೇ ಬೋರ್ಡ್ ವಿರುದ್ಧ ಕಿಡಿಕಾರಿರುವ ಅವರು, 'ನಮಗೂ ಸಾಕಾಗಿದೆ.. ಪಾಕಿಸ್ತಾನ ಹಾಕಿ ಫೆಡರೇಶನ್ ಸುಳ್ಳುಗಳನ್ನು ಹೇಳುತ್ತಿದೆ ಎಂದು ಹೇಳಿದ್ದಾರೆ.
'ಪ್ರವಾಸದ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ವಸತಿ ಕೊರತೆಯಿಂದಾಗಿ ಬೀದಿಗಳಲ್ಲಿ ಅಲೆದಾಡಬೇಕಾಯಿತು. ಮಾತ್ರವಲ್ಲದೆ "ಪಂದ್ಯ ಆಡಲು ಹೋಗುವ ಮೊದಲು ಪಾತ್ರೆಗಳನ್ನು ತೊಳೆಯಬೇಕಾಯಿತು" ಎಂದು ಹೇಳಿದ್ದಾರೆ.
"ನಾವು ಒಕ್ಕೂಟದ ಈ ಪ್ರಸ್ತುತ ನಿರ್ವಹಣೆಯೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಆಟಗಾರರು ಪಂದ್ಯ ಆಡಲು ಹೋಗುವ ಮೊದಲು ಅಡುಗೆಮನೆ ಸ್ವಚ್ಛಗೊಳಿಸಿ ಪಾತ್ರೆಗಳನ್ನು ತೊಳೆಯಬೇಕಾದಾಗ ನೀವು ನಮ್ಮಿಂದ ಯಾವ ಫಲಿತಾಂಶವನ್ನು ನಿರೀಕ್ಷಿಸುತ್ತೀರಿ?" ಎಂದು ಕೋಪಗೊಂಡು ಬಟ್ ಹೇಳಿದರು.
ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ತಂಡದ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ಪಾಕಿಸ್ತಾನ ಕ್ರೀಡಾ ಮಂಡಳಿ (PSB) 10 ಮಿಲಿಯನ್ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನೀಡಿರುವುದಾಗಿ ದೃಢಪಡಿಸಿತ್ತು. ಆದರೆ ಈ ಹಣವನ್ನು ಪಾಕಿಸ್ತಾನ ಹಾಕಿ ಫೆಡರೇಷನ್ ರವಾನಿಸಿರಲಿಲ್ಲ. ಇದು ತೀವ್ರ ಟೀಕೆಗೆ ಗುರಿಯಾಗಿತ್ತು.
ಹೊಟೆಲ್ 10 ದಿನಕ್ಕೆ ಮಾತ್ರ ಬುಕ್ ಆಗಿತ್ತು
"ದುಃಖಕರವೆಂದರೆ Airbnb ವಸತಿ ಸೌಕರ್ಯವನ್ನು ಸಹ 10 ದಿನಗಳವರೆಗೆ ವ್ಯವಸ್ಥೆ ಮಾಡಲಾಗಿತ್ತು, ಆದರೆ ನಾವು 13 ದಿನಗಳವರೆಗೆ ಇರಬೇಕಾಗಿತ್ತು. 10 ದಿನಗಳ ನಂತರ ನಾವು ಅಗ್ಗದ ವಸತಿ ಸೌಕರ್ಯಕ್ಕೆ ಸ್ಥಳಾಂತರಗೊಳ್ಳಬೇಕಾಯಿತು. ಆಸ್ಟ್ರೇಲಿಯಾದಲ್ಲಿ ನಾವು ಅನುಭವಿಸಿದ ಅನುಭವದ ಬಗ್ಗೆ ನಾನು ಮಾತನಾಡುತ್ತಿದ್ದೇನೆ" ಎಂದು ನಾಯಕ ಬಟ್ ಹೇಳಿದರು.
ಅಲ್ಲದೆ ತಾವು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಿಎಚ್‌ಎಫ್ ಆಟಗಾರರಿಗೆ ಎಚ್ಚರಿಕೆ ನೀಡಿದೆ ಎಂದೂ ಬಟ್ ಬಹಿರಂಗಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



