ರಾಜಕೀಯ ಬಿಟ್ಟು ಪದಕ ಗೆಲ್ಲುವ ಕಡೆ ಗಮನ ಹರಿಸಬೇಕಿತ್ತು: ವಿನೇಶ್ ಪೋಗಟ್ ನಡೆಗೆ ಚಿಕ್ಕಪ್ಪ ಮಹಾವೀರ್ ಗರಂ!
ವಿನೇಶ್ 2028ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕೆ ಹೊರತು ರಾಜಕೀಯ ಸೇರುವ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಬೇಡವಾಗಿತ್ತು ಎಂದು ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದಾರೆ.

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಇದೀಗ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ವಿನೇಶ್ ಪೋಗಟ್ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಆಕ್ಷೇಪ ವ್ಯಕ್ತಪಡಿಸಿದ್ದು ವಿನೇಶ್ ರಾಜಕೀಯ ಬಿಟ್ಟು ಪದಕ ಗೆಲ್ಲುವ ಕಡೆ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.
ವಿನೇಶ್ 2028ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕೆ ಹೊರತು ರಾಜಕೀಯ ಸೇರುವ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಬೇಡವಾಗಿತ್ತು ಎಂದು ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದಾರೆ. ವಿನೇಶ್ ರಾಜಕೀಯ ಪ್ರವೇಶದ ನಿರ್ಧಾರ ತಪ್ಪು. ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್ ಆಡಬೇಕು. ವಿನೇಶ್ ಕುಸ್ತಿಪಟು ಬಜರಂಗ್ ಪುನಿಯಾ ಅವರೊಂದಿಗೆ ಕಾಂಗ್ರೆಸ್ ಸೇರಿದ ಕೆಲವು ದಿನಗಳ ನಂತರ ಮಹಾವೀರ್ ಈ ಹೇಳಿಕೆ ನೀಡಿದ್ದಾರೆ.
ಮಹಾವೀರ್ ಸಿಂಗ್ ಫೋಗಟ್ ಅವರು, ವಿನೇಶ್ ಮತ್ತೊಂದು ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ. ಅವಳು ತನ್ನ ಒಲಿಂಪಿಕ್ ಗುರಿಯನ್ನು ಸಾಧಿಸುವತ್ತ ಗಮನ ಹರಿಸಬೇಕು. ಏಕಾಗ್ರತೆ ವಹಿಸಬೇಕು. ನಾನು ಅವರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ ಎಂದರು. ಸಣ್ಣ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರ ಮೇಲೆ ಅವಲಂಬಿತವಾಗಿದೆ. ಅವರನ್ನು ಪೋಷಿಸುವುದು ಮತ್ತು ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಈ ವಯಸ್ಸಿನಲ್ಲಿ ವಿನೇಶ್ ಮತ್ತೊಂದು ಒಲಿಂಪಿಕ್ಸ್ನಲ್ಲಿ ಭಾಗವಹಿಸಬಹುದಿತ್ತು. ಅವಳು ಈ ಬಾರಿ ಚಿನ್ನದ ಪದಕವನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ ಎಂದರು.
ಕಳೆದ ತಿಂಗಳು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಲಾಗಿತ್ತು. ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಕೆಲ ಸಮಯಕ್ಕೂ ಮುನ್ನ ಅವರು 100 ಗ್ರಾಂ ಅಧಿಕ ತೂಕ ಹೊಂದಿದ್ದರು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿತ್ತು. ತಮ್ಮ ವಿರುದ್ಧದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದರು. ಆದರೆ ಇದನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (CAS) ತಿರಸ್ಕರಿಸಿತು. ವಿವಾದದ ನಡುವೆ, ವಿನೇಶ್ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು.
ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿನೇಶ್ ಫೋಗಟ್ ಅವರನ್ನು ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಒಬ್ಬ ಆಟಗಾರ ರಾಜಕೀಯಕ್ಕೆ ಬರಲು ನಿರ್ಧರಿಸಿದಾಗ ಆತನ ಮೇಲಿನ ಎಲ್ಲಾ ಭರವಸೆಗಳು ಕಳೆದುಹೋಗುತ್ತವೆ ಎಂದು ಮಹಾವೀರ್ ಫೋಗಟ್ ಹೇಳಿದರು. ಮಹಾವೀರ್ ಫೋಗಟ್ ಅವರ ಪುತ್ರಿ ಬಬಿತಾ ಫೋಗಟ್ 2019ರಲ್ಲಿ ಬಿಜೆಪಿ ಸೇರಿದ್ದರು.
ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಗೆ ತನ್ನ ಪ್ರಚಾರವನ್ನು ಪ್ರಾರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್, ಜನರ ಆಶೀರ್ವಾದದೊಂದಿಗೆ ಪ್ರತಿ ಯುದ್ಧವನ್ನು ಗೆಲ್ಲುವ ಭರವಸೆ ಇದೆ ಎಂದು ಹೇಳಿದರು. ಹರಿಯಾಣದಲ್ಲಿ 90 ಸದಸ್ಯ ಬಲದ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಆದರೆ ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



