Olympics 2024: ಕೊನೆಯ ಪದಕದ ಆಸೆಯೂ ಹೋಯ್ತು; ಕುಸ್ತಿ ಕ್ವಾರ್ಟರ್ ಫೈನಲ್ ನಲ್ಲಿ ರೀತಿಕಾ ಹೂಡಾ ಸೋಲು
ಪಂದ್ಯದಲ್ಲಿ ಕೊನೆಯ ಅಂಕವನ್ನು ಕಿರ್ಗಿಸ್ತಾನದ ಅಪರಿ ಮೆಡೆಟ್ ಕೈಜಿ ಗಳಿಸಿದರು. ಈ ಕಾರಣಕ್ಕಾಗಿ ಅವರನ್ನು ಈ ಪಂದ್ಯದ ವಿಜೇತೆ ಎಂದು ಘೋಷಿಸಲಾಯಿತು.

ಪ್ಯಾರಿಸ್: ಭಾರತದ ಕುಸ್ತಿಪಟು ರೀತಿಕಾ ಹೂಡಾ ಇಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಿರ್ಗಿಸ್ತಾನ್‌ನದ ಅಪರಿ ಮೆಡೆಟ್ ಕೈಜಿ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತಿದ್ದು ಈ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಈ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವಿಲ್ಲದೆ ಭಾರತದ ಅಭಿಯಾನ ಅಂತ್ಯಗೊಂಡಿದೆ.
ಭಾರತದ ಯುವ ಕುಸ್ತಿಪಟು 21 ವರ್ಷದ ರಿತಿಕಾ ಹೂಡಾ ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕಿರ್ಗಿಸ್ತಾನ್‌ನ ಅಪರಿ ಮೆಡೆಟ್ ಕೈಜಿ ಅವರ ವಿರುದ್ಧ ಸೋತಿದ್ದಾರೆ. ಇವರಿಬ್ಬರ ನಡುವಿನ ಪಂದ್ಯ 6 ನಿಮಿಷಗಳ ಬಳಿಕ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ ಪಂದ್ಯದಲ್ಲಿ ಕೊನೆಯ ಅಂಕವನ್ನು ಕಿರ್ಗಿಸ್ತಾನದ ಅಪರಿ ಮೆಡೆಟ್ ಕೈಜಿ ಗಳಿಸಿದರು. ಈ ಕಾರಣಕ್ಕಾಗಿ ಅವರನ್ನು ಈ ಪಂದ್ಯದ ವಿಜೇತೆ ಎಂದು ಘೋಷಿಸಲಾಯಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಿತಿಕಾ ಕಿರ್ಗಿಸ್ತಾನದ ವಿಶ್ವ ಚಾಂಪಿಯನ್ ಕುಸ್ತಿಪಟುವಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಇಡೀ ಬೌಟ್‌ನಲ್ಲಿ ರಿತಿಕಾ ತನ್ನ ಬಲ ಪ್ರದರ್ಶಿಸಿದರು. ಆದರೆ ದುರದೃಷ್ಟವಶಾತ್ ಅವರು ಸೋಲು ಎದುರಿಸಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



