ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಆಗಮಿಸಿದ ಭಾರತೀಯ ಹಾಕಿ ತಂಡ, ಅದ್ದೂರಿ ಸ್ವಾಗತ!
'ದೇಶಕ್ಕಾಗಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ. ಫೈನಲ್ ಪ್ರವೇಶಿಸಲು ಪ್ರಯತ್ನಿಸಿದೇವು, ಆದರೆ, ನಮ್ಮ ಕನಸು ನನಸು ಆಗಲಿಲ್ಲ. ಆದರೆ ಬರಿಗೈಯಲ್ಲಿ ಹಿಂದಿರುಗಲಿಲ್ಲ'

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿತ ಪದಕ ವಿಜೇತ ಭಾರತೀಯ ಪುರುಷರ ಹಾಕಿ ತಂಡವು ಸ್ವದೇಶಕ್ಕೆ ಆಗಮಿಸಿದೆ. ಹರ್ಮಪ್ರೀತ್ ಸಿಂಗ್ ನೇತೃತ್ವದ ತಂಡ ಶನಿವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅದ್ದೂರಿ ಸ್ವಾಗತ ನೀಡಲಾಯಿತು.
ಪ್ರತಿಯೊಬ್ಬ ಆಟಗಾರರಿಗೂ ಶಾಲು, ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಆಟಗಾರರು ತಮ್ಮ ಪದಕಗಳನ್ನು ಕ್ಯಾಮರಾಗೆ ತೋರಿಸುವ ಮೂಲಕ ವಿಶಿಷ್ಟವಾಗಿ ಗೆಲುವನ್ನು ಆಚರಿಸಿದರು. ಕೆಲವು ಆಟಗಾರರು ಡ್ರಮ್ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಪದಕ, ಪದಕನೇ, ದೇಶಕ್ಕಾಗಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ. ಫೈನಲ್ ಪ್ರವೇಶಿಸಲು ಪ್ರಯತ್ನಿಸಿದೇವು, ಆದರೆ, ನಮ್ಮ ಕನಸು ನನಸು ಆಗಲಿಲ್ಲ. ಆದರೆ ಬರಿಗೈಯಲ್ಲಿ ಹಿಂದಿರುಗಲಿಲ್ಲ. ಪದಕ ಗೆದ್ದು ವಾಪಸ್ಸಾಗಿದ್ದು, ಇದಕ್ಕಾಗಿ ಅಪಾರ ಬೆಂಬಲ ನೀಡಿದ ಕೇಂದ್ರ ಸರ್ಕಾರ, SAI ಮತ್ತು ಒಡಿಶಾ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಪಿಆರ್ ಶ್ರೀಜೇಶ್ ಅಂತರಾಷ್ಟ್ರೀಯ ಹಾಕಿ ಕ್ರೀಡೆಯಿಂದ ನಿವೃತ್ತಿಯಾಗುತ್ತಿರುವ ಕಾರಣ ಈ ಗೆಲುವನ್ನು "ಭಾವನಾತ್ಮಕ ಕ್ಷಣ" ಎಂದು ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



