ಕ್ರೀಡೆ

ರಾಷ್ಟ್ರೀಯ ಜೂನಿಯರ್ ಈಜು ಸ್ಪರ್ಧೆ: ನಟ ಮಾಧವನ್ ಪುತ್ರ ವೇದಾಂತ್ ಮತ್ತೊಂದು ದಾಖಲೆ

ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಅವರು ಈಜು ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ಬರೆದು ಚಿನ್ನದ ಪದಕ ಗೆದ್ದಿದ್ದಾರೆ.

ರಾಷ್ಟ್ರೀಯ ಜೂನಿಯರ್ ಈಜು ಸ್ಪರ್ಧೆ: ನಟ ಮಾಧವನ್ ಪುತ್ರ ವೇದಾಂತ್ ಮತ್ತೊಂದು ದಾಖಲೆ
ಮಾಧವನ್ ಪುತ್ರ ವೇದಾಂತ್
Published On :

ಮುಂಬೈ: ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಅವರು ಈಜು ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ಬರೆದು ಚಿನ್ನದ ಪದಕ ಗೆದ್ದಿದ್ದಾರೆ. 

48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ 16ರ ಹರೆಯದ ವೇದಾಂತ್ ಅವರು 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಸ್ಪರ್ಧೆಯಲ್ಲಿ ಈ ಹಿಂದಿನ 16 ನಿಮಿಷಗಳ ದಾಖಲೆ ಮಾಡಿದ್ದ ವಿಜೇತರ ರೆಕಾರ್ಡ್ ಮುರಿದು ಹೊಸ ದಾಖಲೆಯನ್ನು ಸ್ಥಾಪಿಸಿದರು. 

ಮಾಧವನ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಅಸಾಧ್ಯವೆಂದು ಎಂದಿಗೂ ಹೇಳಬೇಡಿ. 1500 ಮೀಟರ್ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ಜೂನಿಯರ್ ದಾಖಲೆ ಮುರಿದಿದ್ದಾರೆ” ಎಂದಿದ್ದಾರೆ. 

ಸುಮಾರು 16 ನಿಮಿಷಗಳ ಕಾಲದ ಅದ್ವೈತ್ ಪೇಜ್ ಅವರ ದಾಖಲೆಯನ್ನು ವೇದಾಂತ್ ಅವರು ಮುರಿದಿದ್ದಾರೆ ಎಂದು ವಿಡಿಯೋದಲ್ಲಿ ಕಾಮೆಂಟೇಟರ್ ಗಳು ಹೇಳಿದ್ದಾರೆ.

ಆರ್ ಮಾಧವನ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಹಿಂದಿನ ದಾಖಲೆ ಹೊಂದಿರುವ ಅದ್ವೈತ್ ಪೇಜ್, ವೇದಾಂತ್‌ ಸಾಧನೆ ಬಗ್ಗೆ ತುಂಬಾ ಸಂತೋಷವಾಗಿದೆ. ಅಭಿನಂದನೆಗಳು!! ಎಂದಿದ್ದಾರೆ.

ಏಪ್ರಿಲ್‌ನಲ್ಲಿ, ಕೂಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್‌ನಲ್ಲಿ ಪುರುಷರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಆರ್ ಮಾಧವನ್ ಅವರ ಪುತ್ರ ವೇದಾಂತ್ ಚಿನ್ನದ ಪದಕ ಗೆದ್ದ ನಂತರ ಸುದ್ದಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.