ವಿಂಬಲ್ಡನ್: ಪುರುಷರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್, ಮ್ಯಾಕ್ಸ್ ಪರ್ಸೆಲ್ ಜೋಡಿ
ಶನಿವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮತ್ತು ಮ್ಯಾಕ್ಸ್ ಪರ್ಸೆಲ್ ಅವರು ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದರು.

ಲಂಡನ್: ಶನಿವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮತ್ತು ಮ್ಯಾಕ್ಸ್ ಪರ್ಸೆಲ್ ಅವರು ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದರು.
ಐದು ಸೆಟ್ ಗಳ ರೋಚಕ ಪಂದ್ಯದಲ್ಲಿ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಜೋಡಿ ವಿರುದ್ಧ 7-6(5) 6-7(3) 4-6, 6-4, 7-6(10-2 ) ಅಂತರದಿಂದ ಗೆದ್ದು, ಆಸ್ಟ್ರೇಲಿಯಾದ ಆಟಗಾರರು ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪ್ರಶಸ್ತಿ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 34 ವರ್ಷದ ಮ್ಯಾಥ್ಯೂ ಎಬ್ಡೆನ್, ಮಕ್ಕಳಾಗಿರುವಾಗ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುತ್ತಾರೆ ಎಂದು ಜನ ಹೇಳುತ್ತಾರೆ. ಅದನ್ನ ನನಸು ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ನಾನು ವೃತ್ತಿಪರ ಟೆನಿಸ್ ಆಟಗಾರನಾಬೇಕು, ಟಾಪ್ 10ರಲ್ಲಿ ಸ್ಥಾನ ಪಡೆಯಬೇಕು. ಕಳೆದ ವರ್ಷ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಾಗ ಅದನ್ನು ನಂಬಲು ಪ್ರಾರಂಭಿಸಿದೆ. ಅದನ್ನು ಮಾಡಿದ್ದೇನೆ. ಆದರೆ, ಅದು ಆಗುತ್ತದೆ ಎಂದು ನಿಜವಾಗಿಯೂ ಗೊತ್ತಿಲ್ಲರಲಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


