ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್
ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ.

ಪ್ಯಾರಿಸ್: ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ.
ಚೊಚ್ಚಲ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಕನಸಿನೊಂದಿಗೆ 22 ವರ್ಷದ ಸಿಟ್ಸಿಪಾಸ್ ಕಣಕ್ಕಿಳಿದ್ದರು. ಆದರೆ ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೋವಿಚ್ ಎದುರು ಪರಾಭವಗೊಂಡಿದ್ದರು.
ಇದೀಗ ಇನ್ ಸ್ಟಾಗ್ರಾಂನಲ್ಲಿ ನೋವಿನ ಕ್ಷಣಗಳ ಬಗ್ಗೆ ಬರೆದುಕೊಂಡಿರುವ ಸಿಟ್ಸಿಪಾಸ್, ಪಂದ್ಯ ಆರಂಭಕ್ಕೂ ಕೆಲವೇ ನಿಮಿಷಗಳ ಮುನ್ನ ಪ್ರೀತಿಯ ಅಜ್ಜಿಯ ಸಾವಿನ ಸುದ್ದಿ ತಿಳಿಯಿತು. ಅವರು ಜೀವನದ ಮೇಲೆ ಇಟ್ಟಿದ್ದ ಭರವಸೆ ಹಾಗೂ ಸ್ವೀಕರಿಸುವ ಗುಣವನ್ನು ನಾನು ಯಾರಲ್ಲೂ ಕಂಡಿಲ್ಲ. ಈ ಜಗತ್ತಿನಲ್ಲಿ ಆಕೆಯಂತವರು ಇರುವುದು ಉತ್ತಮ. ಅವರು ನಿಮ್ಮನ್ನು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳುತ್ತಾರೆ. ನೀವು ದೊಡ್ಡ ಕನಸನ್ನು ಕಾಣುವಂತೆ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಐದು ಸೆಟ್ ಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಜೊಕೋವಿಟ್, ಸಿಟ್ಸಿಪಾಸ್ ವಿರುದ್ಧ 6-7 (6/8), 2-6, 6-3, 6-2, 6-4 ಅಂತರದಲ್ಲಿ ಗೆಲುವು ಸಾಧಿಸಿ 19ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


