ಕ್ರೀಡೆ

ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ

ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ ಗಾಯದ ಸಮಸ್ಯೆಯಿಂದಾಗಿ ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ
ರವಿ ದಹಿಯಾ
Published On :

ಚೆನ್ನೈ: ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ  ಗಾಯದ ಸಮಸ್ಯೆಯಿಂದಾಗಿ  ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಇರಾನ್‌ನ ಅಲಿರೆಜಾ ನೊಸ್ರೊಟೊಲ್ಲಾ ಸರ್ಲಾಕ್ ವಿರುದ್ಧ ಸೆಣೆಸಿ ರವಿ ಚಿನ್ನದ ಪದಕ ಗಳಿಸಿಕೊಂಡರು. ಅವರು , 9-4 ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಇದಲ್ಲದೆ ಒಲಿಂಪಿಕ್ ಅಲ್ಲದ 79 ಕೆಜಿ ವಿಭಾಗದಲ್ಲಿ ನರಸಿಂಗ್ ಯಾದವ್ ಅವರು ಇರಾಕ್‌ನ ಅಹ್ಮದ್ ಮೊಹ್ಸಿನ್ ಕದಿಮ್ ಅವರನ್ನು 8-2ರಿಂದ ಹಿಂದಿಕ್ಕಿ ಕಂಚು ಗೆದ್ದರೆ . 70 ಕೆಜಿ ವಿಭಾಗದಲ್ಲಿ ಕರಣ್, ಸತ್ಯವರ್ತ್ ಕಾದಿಯಾನ್ (97 ಕೆಜಿ) ತಲಾ ಒಂದೊಂದು ಕಂಚಿನ ಪದಕವನ್ನು ದೇಶಕ್ಕೆ ಕೊಡುಗೆ ನೀಡೀದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.