ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಸರಿತಾಗೆ ಸ್ವರ್ಣ ಪದಕ
ಗುರುವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಂಗೋಲಿಯನ್ ಕುಸ್ತಿಪಟು ಶುದೋರ್ ಬತರ್ಜಾವ್ ಅವರನ್ನು 10-7 ರಿಂದ ಮಣಿಸಿ ಭಾರತದ ಸರಿತಾ ಮೊರ್ ಏಷ್ಯನ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೆನ್ನೈ: ಗುರುವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಂಗೋಲಿಯನ್ ಕುಸ್ತಿಪಟು ಶುದೋರ್ ಬತರ್ಜಾವ್ ಅವರನ್ನು 10-7 ರಿಂದ ಮಣಿಸಿ ಭಾರತದ ಸರಿತಾ ಮೊರ್ ಏಷ್ಯನ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನವದೆಹಲಿಯಲ್ಲಿ ನಡೆದ 2020 ರ ಆವೃತ್ತಿಯಲ್ಲಿ ಅವರು ಚಿನ್ನ ಗೆದ್ದಿದ್ದರು.
ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲಿದ್ದ ಸರಿತಾ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತರಾಗಿದ್ದ ಮಂಗೋಲಿಯನ್ ಕುಸ್ತಿಪಟುವಿನೆದುರು 4-5ರಿಂದ ನಿಕಟವಾಗಿ ಸ್ಪರ್ಧಿಸಿಮೊದಲ ಪಂದ್ಯವನ್ನು ಕಳೆದುಕೊಂಡಿದ್ದರೂ ನಂತರದ ಸುತ್ತುಗಳಲ್ಲಿ ಅವರು ತಮ್ಮ ಆತ್ಮವಿಶ್ವಾಸ ಮರಳಿ ಪಡೆದಿದ್ದರು.
"ಕಳೆದ ಎರಡು ದಿನಗಳಿಂದ ನಾನು ಅಸ್ವಸ್ಥಳಾಗಿದ್ದೆ.ನಾನು ಪ್ರಾರಂಭದಲ್ಲಿ ಆಡುವ ವೇಳೆ ಜ್ವರದ ತಾಪ ಇನ್ನೂ ಇತ್ತು.ಇದು ಕಠಿಣವಾಗಿತ್ತು ಆದರೆ ಕಳೆದ ಒಂದು ವರ್ಷದಲ್ಲಿ ನಾನು ಕಠಿಣ ಅಭ್ಯಾಸ ಮಾಡಿದ್ದರಿಂದ ಪುನರಾಗಮನ ಮಾಡುವ ವಿಶ್ವಾಸವಿತ್ತು” ಎಂದು ಸರಿತಾ ಪತ್ರಿಕೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


