ಕ್ರೀಡೆ

ಫ್ರೆಂಚ್ ಬಾಕ್ಸಿಂಗ್ ಟೂರ್ನಿ: ಚಿನ್ನದ ಪದಕ ಗೆದ್ದ ಭಾರತದ ಅಮಿತ್, ಸಂಜೀತ್‌

ಮಾರಕ ಕೊರೋನಾ ವೈರಸ್ ನ ಸುದೀರ್ಘ ವಿರಾಮದ ಬಳಿಕ ಆರಂಭವಾಗಿರುವ ಫ್ರೆಂಚ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳಾದ ಅಮಿತ್ ಪಾಂಘಾಲ್ ಹಾಗೂ ಸಂಜೀತ್ ಚಿನ್ನದ ಪದಕ ಗೆದ್ದಿದ್ದಾರೆ.

ಫ್ರೆಂಚ್ ಬಾಕ್ಸಿಂಗ್ ಟೂರ್ನಿ: ಚಿನ್ನದ ಪದಕ ಗೆದ್ದ ಭಾರತದ ಅಮಿತ್, ಸಂಜೀತ್‌
ಅಮಿತ್ ಪಾಂಘಾಲ್
Published On :

ಪ್ಯಾರಿಸ್: ಮಾರಕ ಕೊರೋನಾ ವೈರಸ್ ನ ಸುದೀರ್ಘ ವಿರಾಮದ ಬಳಿಕ ಆರಂಭವಾಗಿರುವ ಫ್ರೆಂಚ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳಾದ ಅಮಿತ್ ಪಾಂಘಾಲ್ ಹಾಗೂ ಸಂಜೀತ್ ಚಿನ್ನದ ಪದಕ ಗೆದ್ದಿದ್ದಾರೆ.

ಫ್ರಾನ್ಸ್‌ನ ನಾಂಟೆಸ್ ನಲ್ಲಿ ನಡೆದ ಅಲೆಕ್ಸಿಸ್ ವ್ಯಾಸ್ಟೈನ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್(52 ಕೆಜಿ) ಹಾಗೂ ಸಂಜೀತ್ (91ಕೆಜಿ)ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಈ ಹಿಂದೆ ಅಮಿತ್  ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು.

ಏಶ್ಯನ್ ಚಾಂಪಿಯನ್ ಆಗಿರುವ ಅಮಿತ್ ಶುಕ್ರವಾರ ರಾತ್ರಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಮೆರಿಕದ ರೆನ್ ಅಬ್ರಹಾಂರನ್ನು 3-0 ಅಂತರದಿಂದ ಮಣಿಸಿದರು. ಮತ್ತೊಂದು ಫೈನಲ್ ಸ್ಪರ್ಧೆಯಲ್ಲಿ ಮಾಜಿ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ ಅವರು ಫ್ರಾನ್ಸ್‌ನ ಸೊಹೆಬ್‌ರನ್ನು  ಸೋಲಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.

ಉಳಿದಂತೆ ಏಷ್ಯಾದ ಬೆಳ್ಳಿ ಪದಕ ವಿಜೇತ ಕವಿಂದರ್ ಸಿಂಗ್ ಬಿಶ್ತ್ (57 ಕೆಜಿ) 2-1 ಅಂತರದಲ್ಲಿ ಸ್ಥಳೀಯ ಪ್ರತಿಭೆ ಸ್ಯಾಮ್ಯುಯೆಲ್ ಕಿಸ್ಟೋಹರಿ ಅವರನ್ನು ಸೋಲಿಸಿ ಬೆಳ್ಳಿ ಪದಕ ಗೆದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.