ಕ್ರೀಡೆ

20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನ

ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ 'ಪೀಕಾಕ್ ಆಫ್ ದಿ ಫೇರ್ ವೆಸ್' ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನ
ಡೌಗ್ ಸ್ಯಾಂಡರ್ಸ್
Published On :

ನ್ಯೂಯಾರ್ಕ್: ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ 'ಪೀಕಾಕ್ ಆಫ್ ದಿ ಫೇರ್ ವೆಸ್' ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ. 

20 ಬಾರಿ ಪಿಜಿಎ ಟೂರ್ ಕಿರೀಟ ಗೆಲ್ಲುವುದರ ಜತೆಗೆ ಸ್ಯಾಂಡರ್ಸ್, ಪ್ರಮುಖ ಚಾಂಪಿಯನ್ ಷಿಪ್ ಗಳಾದ 1959ರ ಪಿಜಿಎ ಚಾಂಪಿಯನ್ ಷಿಪ್, 1961ರ ಯುಎಸ್ ಓಪನ್ ಮತ್ತು 1966 ಹಾಗೂ 1970ರ ಓಪನ್ ಚಾಂಪಿಯನ್ ಷಿಪ್ ಗಳಲ್ಲಿ ನಾಲ್ಕು ದ್ವಿತೀಯ ಸ್ಥಾನ ಪಡೆದಿರುವುದು ಸೇರಿದಂತೆ 20 ಸಲ ರನ್ನರ್ ಅಪ್ ಸ್ಥಾನ ಗಳಿಸಿದ್ದರು.

ಜಾರ್ಜಿಯಾದ ಸೀಡರ್ ಡೌನ್ ನಲ್ಲಿ ಜನಿಸಿದ ಸ್ಯಾಂಡರ್ಸ್, ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಗಾಲ್ಫ್ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.