'ದಾಖಲೆಗಳ ಸರದಾರ' ಉಸೇನ್ ಬೋಲ್ಟ್ ದಾಖಲೆ ಮುರಿದ ಆಲಿಸನ್ ಫೆಲಿಕ್ಸ್
ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್ ಅವರು ವೃತ್ತಿ ಜೀವನದ 12ನೇ ಮುಕಟು ಮುಡಿಗೇರಿಸಿಕೊಂಡರು. ಆ ಮೂಲಕ 11 ವಿಶ್ವ ಕಿರೀಟ ಗೆದ್ದಿರುವ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದರು.

ದೋಹಾ: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್ ಅವರು ವೃತ್ತಿ ಜೀವನದ 12ನೇ ಮುಕಟು ಮುಡಿಗೇರಿಸಿಕೊಂಡರು. ಆ ಮೂಲಕ 11 ವಿಶ್ವ ಕಿರೀಟ ಗೆದ್ದಿರುವ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದರು.
ಭಾನುವಾರ ನಡೆದಿದ್ದ ಉದ್ಘಾಟನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 4*400 ಮಿಶ್ರ ರಿಲೆ ವಿಭಾಗದಲ್ಲಿ ಯುಎಸ್‌ಎ ಮಿಶ್ರ ರಿಲೆ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಆಲಿಸನ್ ಫೆಲಿಕ್ಸ್ ಅವರ ವೃತ್ತಿ ಜೀವನದ 12ನೇ ಹಾಗೂ ತಾಯಿಯಾದ ಬಳಿಕ ಮೊದಲ ಪದಕ ಇದಾಯಿತು. 2005ರಲ್ಲಿ ಇವರು ಮೊದಲ ಬಾರಿ ಸ್ವರ್ಣ ಪದಕ ಗೆದ್ದಿದ್ದರು.
ಮಿಚೆಲ್ ಚೆರ್ರಿ, ವಿಲ್ಬರ್ಟ್ ಲಂಡನ್, ಕೌರ್ಟನಿ ಒಕೊಲೊ ಹಾಗೂ ಆಲಿಸನ್ ಫೆಲಿಕ್ಸ್ ಅವರನ್ನೊಳಗೊಂಡ ಅಮೆರಿಕ ಮಿಶ್ರ ರಿಲೆ ತಂಡ 4*400 ಮೀ. ಅನ್ನು 3:09: 34 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಆ ಮೂಲಕ ನೂತನ ವಿಶ್ವ ದಾಖಲೆಯನ್ನು ಮಾಡಿತು. ಜಮೈಕಾ ಎರಡನೇ ಸ್ಥಾನ ಪಡೆದು ಬೆಳ್ಳಿ ಪಡೆದರೆ, ಬಹ್ರೈನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತ ತಂಡ ಏಳನೇ ಸ್ಥಾನ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


