ಅರ್ಚರಿ ಚಾಂಪಿಯನ್‌ಶಿಪ್: ಚಿನ್ನದೊಡನೆ ಒಲಂಪಿಕ್ ಕೋಟಾ ಪಡೆದ ದೀಪಿಕಾ, ಅಂಕಿತಾಗೆ ಬೆಳ್ಳಿ
ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕಾತ್ 21 ನೇ ಏಷ್ಯನ್ ಚಾಂಪಿಯನ್‌ಶಿಪ್ ಅರ್ಚರಿಯಲ್ಲಿ ಫೈನಲ್ಸ್ ತಲುಪಿದ್ದು ಬಿಲ್ಲುಗಾರಿಕೆ ಮಹಿಳಾ ಪುನರಾವರ್ತಿತ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ ಕೋಟಾವನ್ನು ತನ್ನದಾಗಿಸಿಕೊಂಡಿದ್ದಾರೆ.

ಬ್ಯಾಂಕಾಕ್: ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕಾತ್ 21 ನೇ ಏಷ್ಯನ್ ಚಾಂಪಿಯನ್‌ಶಿಪ್ ಅರ್ಚರಿಯಲ್ಲಿ ಫೈನಲ್ಸ್ ತಲುಪಿದ್ದು ಬಿಲ್ಲುಗಾರಿಕೆ ಮಹಿಳಾ ಪುನರಾವರ್ತಿತ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ ಕೋಟಾವನ್ನು ತನ್ನದಾಗಿಸಿಕೊಂಡಿದ್ದಾರೆ.
ಫೈನಲ್ಸ್ ನಲ್ಲಿ ಸಿ ದೀಪಿಕಾ ಚಿನ್ನದ ಪದಕ ಗೆದ್ದರೆ ಅಂಕಿತಾ ರಜತ ಪದಕ ಗಳಿಸಿಕೊಂಡಿದ್ದಾರೆ. ದೀಪಿಕಾ ತನ್ನ ನಿಕಟಪೂರ್ವ ಪ್ರತಿಸ್ಪರ್ಧಿ ಅಂಕಿತಾರನ್ನು 6-0 ಅಂತರದಿಂದ ಪರಾಭವಗೊಳಿಸಿದರು.
ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್: ದೀಪಿಕಾ ಕುಮಾರಿ ಹಾಗೂ ಅಂಕಿತಾ ಇಬ್ಬರೂ ಆಡಳಿತಾತ್ಮಕ ಕಾರಣಕ್ಕಾಗಿ ರಾಷ್ಟ್ರೀಯ ಒಕ್ಕೂಟ ಅಮಾನತಿನಲ್ಲಿರುವ ಕಾರಣ ಧ್ವಜವಿಲ್ಲದೆ ಸ್ಪರ್ಧಿಸಿದ್ದರು. ಅಗ್ರ ಶ್ರೇಯಾಂಕಿತೆ ದೀಪಿಕಾ ಹಾಗೂ ಆರನೇ ಶ್ರೇಯಾಂಕದ ಅಂಕಿತಾ ಬಿಲ್ಲುಗಾರಿಕೆ ಫೈನಲ್ಸ್ ಹಂತ ಪ್ರವೇಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


