ಎಟಿಪಿ ಫೈನಲ್ಸ್ : ಫೆಡರರ್ ಗೆ ಸೋಲು, ಜೊಕೊವಿಚ್‍ಗೆ ಗೆಲುವು
ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ , ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು.

ಲಂಡನ್: ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ , ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು.
ಮತ್ತೊಂದು ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಅವರು ಇಟಲಿಯ ಮ್ಯಾಟ್ಟೊ ಬೆರ್ರೆಟ್ಟಿನಿ ವಿರುದ್ಧ ಗೆದ್ದು ಶುಭಾರಂಭ ಮಾಡಿದರು.
ಭಾನುವಾರ ನಡೆದ ಮೊದಲ ಗೇಮ್‍ಲ್ಲಿ ಎಡವಿದ ಫೆಡರರ್, 5-7, 5-7 ನೇರ ಸೆಟ್‍ಗಳಿಂದ ಆಸ್ಟ್ರೀಯಾದ ಥೀಮ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು.
38ರ ಪ್ರಾಯದ ಸ್ವಿಸ್ ಆಟಗಾರ ಮೊದಲನೇ ಗೇಮ್ ಸೋಲು ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡು 5-5 ಸಮಬಲ ಸಾಧಿಸಿದ್ದರು. ಈ ವೇಳೆ ಥೀಮ್ ಅವರ ಹಿಂಬದಿ ಹೊಡೆತಗಳನ್ನು ಎದುರಿಸುವಲ್ಲಿ ಫೆಡರರ್ ವಿಫಲರಾದರು. ಇದರ ಪರಿಣಾಮ ಆಸ್ಟ್ರೀಯಾ ಆಟಗಾರ 11 ಮತ್ತು 12 ಗೇಮ್ ಗಳಲ್ಲಿ ಗೆದ್ದು ಮೊದಲನೇ ಸೆಟ್ ಅನ್ನು 7-5 ಅಂತರದಲ್ಲಿ ತನ್ನದಾಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


