ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ
ಭಾರತದ ಪ್ರಸಿದ್ದ ಶುಟಿಂಗ್ ತಾರೆ ಅಪೂರ್ವಿ ಚಾಂಡೇಲಾ ಶೂಟಿಂಗ್ ವಿಶ್ವಕಪ್ ನಲ್ಲಿ ಈ ವರ್ಷದ ಎರಡನೇ ಚಿನ್ನದ ಪದಕ ಗಳಿಸಿದ್ದಾರೆ.

Published On :
ಮ್ಯೂನಿಚ್: ಭಾರತದ ಪ್ರಸಿದ್ದ ಶುಟಿಂಗ್ ತಾರೆ ಅಪೂರ್ವಿ ಚಾಂಡೇಲಾ ಶೂಟಿಂಗ್ ವಿಶ್ವಕಪ್ ನಲ್ಲಿ ಈ ವರ್ಷದ ಎರಡನೇ ಚಿನ್ನದ ಪದಕ ಗಳಿಸಿದ್ದಾರೆ. ಜರ್ಮನಿಯ ಮ್ಯೂನಿಚ್ ನಲ್ಲಿ ನಡೆದ ವರ್ಷದ ಮೂರನೇ ಐಎಸ್ಎಸ್ಎಫ್ ವಿಶ್ವಕಪ್ ಪಂದ್ಯಾವಳಿಯಲ್ಲಿ ರೈಫಲ್ / ಪಿಸ್ತೋಲ್ ವಿಭಾಗದ ಮಹಿಳಾ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಅಪೂರ್ವಿ ಬಂಗಾರದ ಪದಕ ಗೆದ್ದಿದ್ದಾರೆ.
ಜೈಪುರ ಮೂಲದ ಶೂಟರ್ ಅಪೂರ್ವಿ 251 ಅಂಕ ಗಳಿಸಿದ್ದರೆ ಇವರ ಸಮೀಪ ಸ್ಪರ್ಧಿ ಚೀನಾದ ಲುಯಾವೊ 250.8, ಅಂಕ ಗಳಿಸಿ ಬೆಳ್ಳಿ ಪದಕ ಗಳಿಸಿದ್ದಾರೆ. ಇನ್ನೋರ್ವ ಚೀನೀ ಶುಟರ್ ಕ್ಸು ಹಾಂಗ್, ಅಂತಿಮ ಪಂದ್ಯದಲ್ಲಿ 229.4 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು
ಇದಕ್ಕೆ ಹಿಂದೆ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಸಹ ಅಪೂರ್ವಿ ದಾಖಲೆಯ ಅಂಕ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Apurvi ChandelaShooting World CupWomen\'s 10m Air Rifleಅಪೂರ್ವಿ ಚಾಂಡೇಲಾಶೂಟಿಂಗ್ ವಿಶ್ವ ಕಪ್ಮಹಿಳೆಯರ 10 ಮೀ ಏರ್ ರೈಫಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


