ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್ಗೆ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜ್ ಮುಕುಟ
ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.

ಢಾಕಾ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 18ರ ಪ್ರಾಯದ ಲಕ್ಷ್ಯ ಸೇನ್ ಅವರು 22-20, 21-18 ಅಂತರದಲ್ಲಿ ನೇರ ಗೇಮ್ಗಳಿಂದ ಮಲೇಷ್ಯಾ ಆಟಗಾರನ ವಿರುದ್ಧ ಗೆಲುವಿನ ನಗೆ ಬೀರಿದರು. ಕಳೆದ ಏಳು ಟೂರ್ನಿಗಳಲ್ಲಿ ಐದನೇ ಪ್ರಶಸ್ತಿ ಇದಾಯಿತು.
‘‘ಬಾಂಗ್ಲಾಾದೇಶದಲ್ಲಿ ಪ್ರಸಕ್ತ ಆವೃತ್ತಿಯ ಕೊನೆಯ ಟೂರ್ನಿಯಲ್ಲಿ ಐದನೇ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದಕ್ಕೆೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ವರ್ಷ ಇದೇ ಲಯವನ್ನು ಮುಂದುವರಿಸುವ ವಿಶ್ವಾಸ ಹೊಂದಿದ್ದೇನೆ. ಎಲ್ಲ ಪ್ರಾಯೋಜಕರಿಗೂ ಧನ್ಯವಾದಗಳನ್ನು ಅರ್ಪಿಸಲು ಇಷ್ಟಪಡುತ್ತೇನೆ,’’ ಎಂದು ಲಕ್ಷ್ಯ ಸೇನ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


