ಯುಎಸ್ ಓಪನ್ 2019: ವಿಶ್ವಶ್ರೇಷ್ಠ ಫೆಡರರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಮಣಿದ ನಗಾಲ್
ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.

ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.
ಫೆಡರರ್ ನಗಾಲ್ ಅವರನ್ನು 4-6, 6-1, 6-2, 6-4 ಸೆಟ್‌ಗಳಿಂದ ಮಣಿಸಿದರು.
ಸೋಮವಾರ ನಡೆದ ಯುನೈಟೆಡ್ ಸ್ಟೇಟ್ಸ್ ಓಪನ್ ಪಂದ್ಯಾವಳಿಯಲ್ಲಿ ಮೊದಲಸೆಟ್ ನಲ್ಲಿ ನಗಾಲ್ ಉತ್ತಮ ಪ್ರದರ್ಶನ ನಿಡಿ 6-4. ಅಂತರದ ಗೆಲುವು ಸಾಧಿಸಿದ್ದರೂ ನಂತರದ ಸೆಟ್ ಗಳಲ್ಲಿ ಫೆಡರರ್ ಮತ್ತೆ ಟ್ರ್ಯಾಕ್ ಗೆ ಮರಳಿದ್ದರು. 190 ನೇ ಶ್ರೇಯಾಂಕದ ಭಾರತದ ಆಟಗಾರ ಸುಮಿತ್ ವಿಶ್ವರ ನಂ.3 ಆಟಗಾರನ ವಿರುದ್ಧ ತೀವ್ರ ಸ್ಪರ್ಧೆ ಒಡ್ಡಿದರೂ ಗೆಲುವು ಸಾಧಿಸಲಾಗಲಿಲ್ಲ.
ಜುಲೈನಲ್ಲಿ ವಿಂಬಲ್ಡನ್‌ನಲ್ಲಿ ನಡೆದ ಫೈನಲ್‌ನಲ್ಲಿ ಸೋತ ಫೆಡರರ್ 22 ವರ್ಷದ ನಗಾಲ್ ನನ್ನು ಮಣಿಸುವ ಮೂಲಕ ಯಶಸ್ವಿಯಾಗಿ ಎರಡನೇ ಸುತ್ತು ಪ್ರವೇಶಿಸಿದರೆ ನಗಾಲ್ ಟೂರ್ನಿಯಿಂದ ಹೊರನಡೆದಿದ್ದಾರೆ.
ಇನ್ನೊಂದೆಡೆ ಮೊದಲ ದಿನದಾಟದಲ್ಲಿ ರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಕ್ ಮತ್ತು ವೀನಸ್ ವಿಲಿಯಮ್ಸ್ ಕೂಡ ಜಯದೊಡನೆ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


