ಯುಎಸ್ ಓಪನ್

ಯುಎಸ್ ಓಪನ್: ಭಾರತದ ಬೋಪಣ್ಣ ಜೋಡಿಗೆ ಸೋಲು
ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಾಲೋವ್ ಜೋಡಿ ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಯುಎಸ್ ಓಪನ್: ಅನರ್ಹಗೊಂಡು ಟೂರ್ನಿಯಿಂದ ಹೊರನಡೆದ ಚೊಕೊವಿಚ್
ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ.

ಯುಎಸ್ ಓಪನ್ 2020: ಪುರುಷರ ಡಬಲ್ಸ್ ಎರಡನೇ ಸುತ್ತಿಗೆ ರೋಹನ್ ಬೋಪಣ್ಣ
ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಇಂಡೋ-ಕೆನಡಿಯನ್ ಜೋಡಿ ರೋಹನ್ ಬೋಪಣ್ಣ ಮತ್ತು ಡೆನಿಸ್ ಶಪೋವೊಲೊವ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಯುಎಸ್ ಓಪನ್: ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಗೆ ಸೋಲು
ಭಾರತದ ಯುವ ಆಟಗಾರ ಸುಮಿತ್ ನಗಾಲ್ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ನಿರ್ಮಿಸಿದ್ದಾರೆ.

ಭಾರತದ 7 ವರ್ಷಗಳ ನಿರೀಕ್ಷೆ ಪೂರ್ಣ: ಯುಎಸ್ ಓಪನ್ ಎರಡನೇ ಸುತ್ತು ಪ್ರವೇಶಿಸಿದ ಸುಮಿತ್ ನಗಾಲ್
ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ಸುಮಿತ್ ನಗಾಲ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ 2013ರಿಂದೀಚೆಗೆ ಪ್ರತಿಷ್ಠಿತ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೋವಿಡ್: ಯುಎಸ್ ಓಪನ್ ನಿಂದ ಹಿಂದೆ ಸರಿದ ನಡಾಲ್
ಆಸ್ಟ್ರೇಲಿಯಾದ ನಂಬರ್ ಒನ್ ಮಹಿಳಾ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಯುಎಸ್ ಓಪನ್‌ನಿಂದ ಹಿಂದೆ ಸರಿದ ಬಳಿಕ, ಹಾಲಿ ಪುರುಷ ಚಾಂಪಿಯನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕಿತ ಸ್ಪೇನ್‌ನ ರಾಫೇಲ್ ನಡಾಲ್ ಸಹ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಆದರೆ ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿ

ಯುಎಸ್ ಓಪನ್: ಸುಮಿತ್ ನಗಾಲ್ ಗೆ ನೇರ ಪ್ರವೇಶ
ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರಷರ ಸಿಂಗಲ್ಸ್ ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಿದ್ದಾರೆ. ಟೂರ್ನಿಗೆ ಆಗಸ್ಟ್ 31ರಂದು ಚಾಲನೆ ದೊರೆಯಲಿದೆ.

ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್
ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

23 ಬಾರಿ ಚಾಂಪಿಯನ್ ಸೆರೆನಾ ಮಣಿಸಿ ಗ್ರಾಂಡ್ ಸ್ಲಾಮ್ ಗೆದ್ದ 19 ವರ್ಷದ ಬಿಯಾಂಕಾ ಆಂಡ್ರೀಸ್ಕು
ಯುಎಸ್ ಓಪನ್ ಟೂರ್ನಿಯಲ್ಲಿ 23 ಗ್ರಾಂಡ್ ಸ್ಲಾಮ್ ವಿನ್ನರ್ ಅಮೆರಿಕದ ಸೆರೆನಾ ವಿಲಿಯಮ್ಸ್ ಗೆ 19 ವರ್ಷದ ಉದಯೋನ್ಮುಖ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಆಘಾತ ನೀಡಿದ್ದು. ಚೊಚ್ಚಲ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

