ಕ್ರೀಡೆ

ಯುಎಸ್ ಓಪನ್ 2020: ಪುರುಷರ ಡಬಲ್ಸ್ ಎರಡನೇ ಸುತ್ತಿಗೆ ರೋಹನ್ ಬೋಪಣ್ಣ 

ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಇಂಡೋ-ಕೆನಡಿಯನ್ ಜೋಡಿ ರೋಹನ್ ಬೋಪಣ್ಣ ಮತ್ತು ಡೆನಿಸ್ ಶಪೋವೊಲೊವ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಯುಎಸ್ ಓಪನ್ 2020: ಪುರುಷರ ಡಬಲ್ಸ್ ಎರಡನೇ ಸುತ್ತಿಗೆ ರೋಹನ್ ಬೋಪಣ್ಣ 
Published On :

ನ್ಯೂಯಾರ್ಕ್: ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಇಂಡೋ-ಕೆನಡಿಯನ್ ಜೋಡಿ  ರೋಹನ್ ಬೋಪಣ್ಣ ಮತ್ತು  ಡೆನಿಸ್ ಶಪೋವೊಲೊವ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಟೂರ್ನಮೆಂಟ್ ಓಪನರ್‌ನಲ್ಲಿ ಬೋಪಣ್ಣ ಮತ್ತು  ಡೆನಿಸ್ ಶಪೋವೊಲೊವ್ ಅಮೆರಿಕದ ಎದುರಾಳಿಗಳನ್ನು  6-2, 6-4 ಸೆಟ್‌ಗಳಿಂದ ಸೋಲಿಸಿದರು.

ಇಂಡೋ-ಕೆನಡಿಯನ್ ಜೋಡಿ ಈಗ ಆರನೇ ಶ್ರೇಯಾಂಕಿತರಾದ ಕೆವಿನ್ ಕ್ರಾವಿಯೆಟ್ಜ್ ಮತ್ತು ಆಂಡ್ರಿಯಾಸ್ ಮೈಸ್ ಅವರನ್ನು ಎದುರಿಸಲಿದೆ

ಸುಮಿತ್ ನಗಾಲ್ ಮತ್ತು ದಿವಿಜ್ ಶರಣ್ ಅವರ ನಿರ್ಗಮನದ ನಂತರ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಬೋಪಣ್ಣ. ಅವರಾಗಿದ್ದಾರೆ.  ವಿಶ್ವದ 3 ಮತ್ತು ಎರಡನೇ ಶ್ರೇಯಾಂಕಿತ ಆಸ್ಟ್ರಿಯಾದ ಡಾಮಿನಿಕ್ ಥೀಮ್ ವಿರುದ್ಧ ಸೋತ ನಂತರ ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಟೂರ್ನಿಯಿಂದ ಹೊರಬಿದ್ದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.