ಕ್ರೀಡೆ

ಯುಎಸ್ ಓಪನ್ ಗೆ ಅರ್ಹತೆ ಪಡೆದ ಸುಮಿತ್‌ ನಗಾಲ್‌ ಗೆ ಟೆನ್ನಿಸ್ ದೈತ್ಯ ಫೆಡರರ್ ಎದುರಾಳಿ!

ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಯುಎಸ್ ಓಪನ್ ಗೆ ಅರ್ಹತೆ ಪಡೆದ ಸುಮಿತ್‌ ನಗಾಲ್‌ ಗೆ ಟೆನ್ನಿಸ್ ದೈತ್ಯ ಫೆಡರರ್ ಎದುರಾಳಿ!
ಸುಮಿತ್‌ ನಗಾಲ್‌
Published On :

ನವದೆಹಲಿ: ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ  ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಶುಕ್ರವಾರ ನಡೆದ ಅಂತಿಮ ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್‌ನ ಜೊವಾವೊ ಮೆನೆಜೆಸ್‌ರನ್ನು ಎದುರಿಸಿದ ನಗಾಲ್ ಈ ಪಂದ್ಯ ಗೆಲ್ಲುವ ಮೂಲಕ ತಾನು  20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು  ಗೆದ್ದ ಜಾಗತಿಕ ಶ್ರೇಷ್ಠ ಫೆಡರರ್ ಅವರನ್ನು ಎದುರಿಸಲಿರುವುದಾಗಿ ಊಹಿಸಿರಲಿಲ್ಲ.

 ಎರಡು ಗಂಟೆ 27 ನಿಮಿಷಗಳಲ್ಲಿ ಬ್ರೆಜಿಲ್ ಆಟಗಾರನ ವಿರುದ್ಧ   5-7, 6-4, 6-3 ಅಂತರದ ಗೆಲುವು ಸಾಧಿಸಿದರು.

22 ವರ್ಷದ ಸುಮಿತ್ ಈ ದಶಕದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಮುಖ್ಯ  ಪಂದ್ಯಾವಳಿಯಲ್ಲಿ ಕಾಣಿಸಿಕೊಂಡ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮದೇವ್ ದೇವರಮನ್, ಯೂಕಿ ಭಾಂಬ್ರಿ, ಸಕೇತ್ ಮೈನೆನಿ ಮತ್ತು ಪ್ರಜ್ನೇಶ್ ಗುನ್ನೇಶ್ವರನ್  ಈ ಹಿಂದೆ ಈ ಸಾಧನೆ ಮಾಡಿದ್ದರು.

2015 ರಲ್ಲಿ ವಿಯೆಟ್ನಾಂನ ನಾಮ್ ಹೊವಾಂಗ್ ಲೈ ಜತೆ ಸೇರಿ  ವಿಂಬಲ್ಡನ್ ಯುವಕರ ಡಬಲ್ಸ್ ಗೆದ್ದಾಗ ಜೂನಿಯರ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸುಮಿತ್ ಪಾತ್ರರಾಗಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.