ಕ್ರೀಡೆ

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!

ಫುಟ್ಬಾಲ್ ಲೋಕದ ಪ್ರತಿಷ್ಟಿತ ಪ್ರಶಸ್ತಿ ಪ್ರದಾನವಾಗಿದ್ದು, ಫೀಫಾ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಮಿಡ್‌ಫೀಲ್ಡರ್ ಲೂಕಾ ಮೋಡ್ರಿಕ್ ಆಯ್ಕೆಯಾಗಿದ್ದಾರೆ.

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!
ಪ್ರಶಸ್ತಿ ಸ್ವೀಕರಿಸಿದ ಲೂಕಾ ಮೋಡ್ರಿಕ್
Published On :
ಲಂಡನ್: ಫುಟ್ಬಾಲ್ ಲೋಕದ ಪ್ರತಿಷ್ಟಿತ ಪ್ರಶಸ್ತಿ ಪ್ರದಾನವಾಗಿದ್ದು, ಫೀಫಾ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಮಿಡ್‌ಫೀಲ್ಡರ್ ಲೂಕಾ ಮೋಡ್ರಿಕ್ ಆಯ್ಕೆಯಾಗಿದ್ದಾರೆ.
ಆ ಮೂಲಕ ಮೋಡ್ರಿಕ್ ಫುಟ್ಬಾಲ್ ಲೋಕದ ದಂತಕಥೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಅವರ ದಶಕದ ಪಾರಮ್ಯವನ್ನು ಮುರಿದಿದ್ದಾರೆ. ಈ ಹಿಂದೆಯೇ ಫಿಫಾ ಪ್ರಶಸ್ತಿ ಘೋಷಣೆಯಾಗಿತ್ತಾದಕೂ ಲಂಡನ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ಕ್ರೊವೇಷಿಯಾ ಮಿಡ್‌ಫೀಲ್ಡರ್ ಲೂಕಾ ಮೋಡ್ರಿಕ್ ಕುಟುಂಬ ಸಮೇತರಾಗಿ ಬಂದು ಪ್ರಶಸ್ತಿ ಸ್ವೀಕರಿಸಿದರು.
ಕಳೆದ ವಿಶ್ವಕಪ್ ನಲ್ಲಿ ರಷ್ಯಾ ಮತ್ತು ಡೆನ್ಮಾರ್ಕ್ ವಿರುದ್ಧ ಮೋಡ್ರಿಕ್ ಗಳಿಸಿದ ಗೋಲುಗಳ ನೆರವಿನಿಂದಾಗಿ ಕ್ರೊವೇಷಿಯ ಗೆಲುವು ಸಾಧಿಸಿತ್ತು. ಅಂತೆಯೇ ಮೋಡ್ರಿಕ್ ಅದ್ಬುತ ಪ್ರದರ್ಶನದಿಂದಾಗಿ ಕ್ರೊವೇಷಿಯಾ ಫೈನಲ್ ಗೂ ಪ್ರವೇಶಿಸಿತ್ತು. ಇಂತಹ ಲೂಕಾ ಮೋಡ್ರಿಕ್ ಇದೀಗ ವರ್ಷದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 
ಪ್ರಶಸ್ತಿ ಸ್ವೀಕಾರದ ಬಳಿಕ ಮಾತನಾಡಿದ ಲೂಕಾ, ಮೊದಲ ಬಾರಿಗೆ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ನಿಜಕ್ಕೂ ಇದು ನನ್ನ ಜೀವನದ ಅವಿಸ್ಮರಣೀಯ ದಿನ. ನನ್ನ ಖುಷಿಯನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಈ ಪ್ರಶಸ್ತಿಗೆ ನನ್ನೊಬ್ಬನ ಶ್ರಮ ಮಾತ್ರವಿಲ್ಲ. ನನ್ನ ಬೆನ್ನ ಹಿಂದೆ ನಿಂತು ನನ್ನನ್ನು ಹುರಿದುಬಿಂಸಿ ಕೈ ಹಿಡಿದು ಮೇಲೆತ್ತಿದ ಸಾಕಷ್ಟು ಮಂದಿ ಇದ್ದಾರೆ ಅವರಿಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಲೂಕಾ ಹೇಳಿದರು.
ಇನ್ನು ಲೂಕಾ ರಿಯಲ್ ಮ್ಯಾಡ್ರಿಡ್ ತಂಡದ ಪ್ರಮುಖ ಆಟಗಾರರೂ ಕೂಡ ಆಗಿದ್ದು, ಮ್ಯಾಡ್ರಿಡ್ ತಂಡ ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.  ಲಿವರ್‌ ಪೂಲ್‌ನ ಈಜಿಪ್ಟಿಯನ್ ಮುನ್ಪಡೆ ಆಟಗಾರ ಮುಹಮ್ಮದ್ ಸಲಾಹ್ ಮತ್ತು ರೊನಾಲ್ಡೊ ಅವರನ್ನು ಹಿಂದಿಕ್ಕಿ ಮೋಡ್ರಿಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಇನ್ನು ದಶಕಗಳ ಕಾಲ ಫೀಫಾ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದ ಸೂಪರ್ ಸ್ಟಾರ್  ಗಳಾದ ಲಿಯೋನಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಕೂಡ ವರ್ಷದ ಆಟಗಾರ ಪ್ರಶಸ್ತಿಗೆ ಮೋಡ್ರಿಕ್ ಅವರಿಗೇ ಮತ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಅಚ್ಚರಿ ಎಂದರೆ ಫೀಫಾ ಪ್ರಶಸ್ತಿ ಸಮಾರಂಭಕ್ಕೆ ಸಮಾರಂಭದ ಕೇಂದ್ರ ಬಿಂದುಗಳಾಗಿದ್ದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಮಹಮದ್ ಸಲಾ ಗೈರಾಗಿದ್ದರು. ಈ ಮೂವರೂ ಆಟಗಾರರು ದಶಕಗಳಿಂದ ಫೀಫಾ ಪ್ರಶಸ್ತಿ ಮೇಲೆ ಅಧಿಪತ್ಯ ಹೊಂದಿದ್ದರು. ಹಲವಾರು ವರ್ಷ ಅಗ್ರಸ್ಥಾನಿಗಳಾಗಿದ್ದರೂ ಕೂ ಈ ಆಟಾಗಾರರು ಸಮಾರಂಭದಲ್ಲಿ ಭಾಗವಹಿಸದೇ ಇದೀಗ ಫುಟ್ಬಾಲ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.