ಕ್ರೀಡೆ

ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್

5 ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಭಾರಿ ಆಘಾತ ಅನುಭವಿಸಿದ್ದು, ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಿಲ್ ಮನ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.

ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್
ರೋಜರ್ ಫೆಡರರ್
Published On :
ವಾಷಿಂಗ್ಟನ್: 5 ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಭಾರಿ ಆಘಾತ ಅನುಭವಿಸಿದ್ದು, ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಿಲ್ ಮನ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.
ಅಮೆರಿಕಾದಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2018ರ ಟೂರ್ನಿಯಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್ ಆಘಾತಕಾರಿ ಸೋಲು ಅನುಭವಿಸಿದ್ದು, ಆಸ್ಟ್ರೇಲಿಯಾದ ಜೆ ಮಿಲ್ಮನ್‌ ವಿರುದ್ಧ 6-3, 5-7, 6-7, 6-7 ನೇರ ಸೆಟ್ ಗಳ ಅಂತರದಿಂದ ಸೋಲು ಕಂಡಿದ್ದಾರೆ. 
ಹಾಲಿ ಋತುವಿನ ಕೊನೆಯ ಗ್ರಾಂಡ್‌ ಸ್ಲಾಮ್ ಆದ ಅಮೆರಿಕ ಓಪನ್ ಟೆನಿಸ್‌ನಲ್ಲಿ ನೊವಕ್ ಕೊಜೊವಿಚ್ ಮತ್ತು ಐದು ಬಾರಿ ಯುಎಸ್ ಓಪನ್ ಗೆದ್ದಿರುವ ಫೆಡರರ್ ರೋಜರ್ ಫೆಡರರ್ ಪ್ರಶಸ್ತಿ ಫೇವರಿಟ್‌ಗಳಾಗಿದ್ದರು. ಆದರೆ ಈ ಬಾರಿ ಫೆಡರರ್ ಆಘಾತ ಅನುಭವಿಸುವ ಮೂಲಕ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.