ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ನಲ್ಲಿ ಸ್ವರ್ಣಕ್ಕೆ ಮುತ್ತಿಟ್ಟ ಪ್ರಣಬ್ ಬರ್ಧಾನ್, ಶಿಬ್ನತ್ ಸರ್ಕಾರ್
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಕ್ರೀಡಾಪಟುಗಳ ಚಿನ್ನದ ಬೇಟೆ ಮುಂದುವರೆದಿದ್ದು, ಬ್ರಿಡ್ಜ್ ಮೆನ್ಸ್ ನಲ್ಲಿ ಪ್ರಣಬ್ ಬರ್ಧಾನ್ ಹಾಗೂ ಶಿಬ್ನತ್ ಡೆ ಸರ್ಕಾರ್ ಅವರು ಶನಿವಾರ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ...

Published On :
ಜಕಾರ್ತ: ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಕ್ರೀಡಾಪಟುಗಳ ಚಿನ್ನದ ಬೇಟೆ ಮುಂದುವರೆದಿದ್ದು, ಬ್ರಿಡ್ಜ್ ಮೆನ್ಸ್ ನಲ್ಲಿ ಪ್ರಣಬ್ ಬರ್ಧಾನ್ ಹಾಗೂ ಶಿಬ್ನತ್ ಡೆ ಸರ್ಕಾರ್ ಅವರು ಶನಿವಾರ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಏಷ್ಯನ್ ಗೇಮ್ಸ್ ಆರಂಭವಾದಾಗಿನಿಂದಲೂ ಭಾರತೀಯ ಕ್ರೀಡಾಪಟುಗಳು ಒಂದರ ಹಿಂದೆ ಒಂದರಂತೆ ಕ್ರೀಡೆಯಲ್ಲಿ ಪದಕದ ಬೇಟೆಯಾಡುತ್ತಲೇ ಇದ್ದಾರೆ. ಇದರಂತೆ ಇಂದೂ ಸಹ ಚಿನ್ನದ ಬೇಟೆ ಮುಂದುವರೆದಿದೆ. ಈ ಹಿಂದಷ್ಟೇ ಬಾಕ್ಸರ್ ಅಮಿತ್ ಪಂಘಾಲ್ ಪುರುಷರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಇದೀಗ ಬ್ರಿಡ್ಜ್ ಮೆನ್ಸ್ ನಲ್ಲಿ ಪ್ರಣಬ್ ಬರ್ಧಾನ್ ಹಾಗೂ ಶಿಬ್ನತ್ ಡೆ ಸರ್ಕಾರ ಅವರು ಚಿನ್ನವನ್ನು ಗೆದ್ದು ಹೆಮ್ಮೆ ಪಡುವಂತೆ ಮಾಡಿದ್ದಾರೆ.
60 ವರ್ಷದ ಪ್ರಣಬ್ ಬರ್ಧನ್ ಹಾಗೂ 56 ವರ್ಷದ ಶಿಬ್ನತ್ ಸರ್ಕಾರ್ ಅವರು ಫೈನಲ್ ಸುತ್ತಿನಲ್ಲಿ ಒಟ್ಟು 384 ಅಂಕಗಳಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತgoldಚಿನ್ನAsian Games 2018ಏಷ್ಯನ್ ಗೇಮ್ಸ್ 2018Pranab BardhanShibhnath Sarkarಪ್ರಣಬ್ ಬರ್ಧಾನ್ಶಿಬ್ನತ್ ಡೆ ಸರ್ಕಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


