ವಿಂಬಲ್ಡನ್ 2018: ವಿಶ್ವದ ನಂಬರ್ 1 ಆಟಗಾರ ನಡಾಲ್ ಮಣಿಸಿದ ಜಾಕೋವಿಕ್
ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ರನ್ನು ನುವಾಕ್ ಜಾಕೋವಿಕ್ ಮಣಿಸಿ ಫೈನಲ್ ಗೇರಿದ್ದಾರೆ.

Published On :
ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ರನ್ನು ನುವಾಕ್ ಜಾಕೋವಿಕ್ ಮಣಿಸಿ ಫೈನಲ್ ಗೇರಿದ್ದಾರೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಜಾಕೋವಿಕ್ 6-4, 3-6, 7-6 (11-9), 3-6, 10-8 ಅಂತರದಲ್ಲಿ ನಡಾಲ್ ರನ್ನು ಮಣಿಸಿ ಫೈನಲ್ ಗೇರಿದ್ದಾರೆ.
ಜಾಕೋವಿಕ್ ಮತ್ತು ನಡಾಲ್ ನಡುವಿನ 2ನೇ ಸೆಮಿಫೈನಲ್ ಪಂದ್ಯ ಟೂರ್ನಿಯ 2ನೇ ಸುಧೀರ್ಘ ಪಂದ್ಯವಾಗಿತ್ತು. ಈ ಹಿಂದೆ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಮೊದಲ ಸೆಮಿಫೈನಲ್ಸ್ ಪಂದ್ಯ ಸುಮಾರು ಆರೂವರೆ ಗಂಟೆಗಳ ಕಾಲ ನಡೆದಿತ್ತು. ಅಂತೆಯೇ 2ನೇ ಸೆಮಿ ಫೈನಲ್ ಪಂದ್ಯ ಕೂಡ ಬರೊಬ್ಬರಿ 5 ಗಂಟೆ 17 ನಿಮಿಷ ನಡೆದು ದಾಖಲೆ ಬರೆದಿದೆ.
ಫೈನಲ್ ನಲ್ಲಿ ಜಾಕೋವಿಕ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SportsTennisಕ್ರೀಡೆಟೆನ್ನಿಸ್Londonಲಂಡನ್Novak Djokovicರಾಫೆಲ್ ನಡಾಲ್ವಿಂಬಲ್ಡನ್ 2018ನುವಾಕ್ ಜಾಕೋವಿಕ್Wimbledon 2018 Rafael Nadal
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


