ಕಾಮನ್ ವೆಲ್ತ್ ಕ್ರೀಡಾಕೂಟ 2018: ಭಾರತಕ್ಕೆ 16ನೇ ಚಿನ್ನ ತಂದುಕೊಟ್ಟ ಅನೀಶ್ ಬನ್ವಾಲಾ
ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುವರೆದಿದ್ದು, 9ನೇ ದಿನವಾದ ಶುಕ್ರವಾರ ಶೂಟರ್ ಅನೀಷ್ ಭನ್ವಾಲಾ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ...

Published On :
ಗೋಲ್ಡ್'ಕೋಸ್ಟ್; ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುವರೆದಿದ್ದು, 9ನೇ ದಿನವಾದ ಶುಕ್ರವಾರ ಶೂಟರ್ ಅನೀಶ್ ಬನ್ವಾಲಾ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
15 ವರ್ಷದ ಅನೀಶ್ ಬನ್ವಾಲಾ ಅವರು, 25 ಎಮ್ ರ್ಯಾಪಿಡ್ ಫೈರ್ ಪಿಸ್ತೂಲ್ ನಲ್ಲಿ ಚಿನ್ನವನ್ನು ಗೆದ್ದುಕೊಂಡಿದ್ದು, ಇದು ಭಾರತದ 16ನೇ ಚಿನ್ನದ ಪದಕವಾಗಿದೆ.
ಇದರಂತೆ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ತೇಜಸ್ವಿನಿಯವರು 50 ಮೀಟರ್ ರೈಫಲ್ ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ. ಭಾರತದವರೇ ಆಗಿರುವ ಅಂಜುಮ್ ಮೌದ್ಗಿಲ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಪದಕ ಪಟ್ಟಿಯಲ್ಲಿ ಭಾರತದ ಒಟ್ಟು 16 ಚಿನ್ನದ ಪದಕ, 8 ಬೆಳ್ಳಿ, 10 ಕಂಚಿನ ಪದಕಗಳನ್ನು ಪಡೆದುಕೊಳ್ಳುವ ಮೂಲಕ 3ನೇ ಸ್ಥಾವನ್ನು ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತgoldಚಿನ್ನshooterಶೂಟರ್TejaswiniAnjum Moudgilಕಾಮನ್ ವೆಲ್ತ್ ಕ್ರೀಡಾಕೂಟ 20182018 Commonwealth GamesAnish Bhanwalaಅನಿಲ್ ಭನ್ವಾಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


