ಕ್ರೀಡೆ

ಡೇವಿಸ್ ಕಪ್ ಪ್ಲೇ-ಆಫ್: ಕೆನಡಾ ವಿರುದ್ಧ ಭಾರತದ ಅಭಿಯಾನ ಪ್ರಾರಂಭ

ಇಂದು ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ ಆಫ್ ಟೈ ಪಂದ್ಯಗಳು ಪ್ರಾರಂಭವಾಗಲಿದೆ,

ಡೇವಿಸ್ ಕಪ್ ಪ್ಲೇ-ಆಫ್: ಕೆನಡಾ ವಿರುದ್ಧ ಭಾರತದ ಅಭಿಯಾನ ಪ್ರಾರಂಭ
ಡೇವಿಸ್ ಕಪ್
Published On :
ಎಡ್ಮಿಂಟನ್: ಇಂದು ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ ಆಫ್ ಟೈ ಪಂದ್ಯಗಳು ಪ್ರಾರಂಭವಾಗಲಿದೆ, ನಾರ್ತ್ ಲ್ಯಾಂಡ್ಸ್ ಕೊಲಿಸಿಯಮ್, ಎಡ್ಮಿಂಟನ್ ನ ಒಳಾಂಗಣ ಕ್ರೀದಾಂಗಣದಲ್ಲಿ ಭಾರತವು ಆತಿಥೇಯ ಕೆನಡಾ ವಿರುದ್ಧ ಸೆಣಸಲಿದೆ.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ 154 ನೇ ಶ್ರೇಯಾಂಕಿತ ರಾಮ್ ಕುಮಾರ್ ರಾಮನಾಥನ್, ಬ್ರಾಡ್ಲಿ ಶನು ವಿರುದ್ಧದ ಆಡಿದರೆ, ಎರಡನೇ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಯೂಕಿ ಭಾಂಬ್ರಿ, ವಿಶ್ವದ 51ನೇ ಶ್ರೇಯಾಂಕದ ಆಟಗಾರ ಡೆನಿಸ್ ಶಪೊವೊಲೋವ್ ಅವರನ್ನು ಎದುರಿಸಲಿದ್ದಾರೆ.
16 ರಾಷ್ಟ್ರಗಳ ವರ್ಲ್ಡ್ ಗ್ರೂಪ್ ಗೆ ಸೇರಲು ಬಯಸಿ ಭಾರತೀಯ ತಂಡವು ತನ್ನ ನಾಲ್ಕನೇ ಪ್ರಯತ್ನದಲ್ಲಿ ತೊಡಗಿದೆ. ಭರತವು ಕಳೆದ ಮೂರು ವರ್ಷಗಳಲ್ಲಿ - 2014 ರಲ್ಲಿ ಸೆರ್ಬಿಯಾ , 2015 ರಲ್ಲಿ ಜೆಕ್ ರಿಪಬ್ಲಿಕ್ ಮತ್ತು 2016 ರಲ್ಲಿ  ಸ್ಪೇನ್ ನಲ್ಲಿ ನಡೆದ ಪ್ಲೇ-ಆಫ್ ಗಳಲ್ಲಿ ಭಾರತ ಪರಾಭವ ಅನುಭವಿಸಿತ್ತು..
ಭಾರತ ತಂಡದ ನಾಯಕ ಮಹೇಶ್ ಭೂಪತಿ, ರೋಹನ್ ಬೋಪಣ್ಣ ರನ್ನು ಸಕತ್ ಮೈನೆನಿ ಬದಲಿಗೆ ಪುರವ್ ರಾಜಾ ಅವರೊಡನೆ ಕಣಕ್ಕೆ ಇಳಿಸಿರುವುದು ಆಶ್ಚರ್ಯ ಮೂಡಿಸಿದೆ. ನಾಳೆ ನಡೆಯಲಿರುವ ಪುರುಷರ ಡಬಲ್ಸ್ ಪಂದ್ಯದಲ್ಲಿ ಈ ಜೋಡಿ ಹೇಗೆ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.