ಚೀನಾ ಪ್ರೋ ಬಾಕ್ಸಿಂಗ್ ನಲ್ಲೂ ಭಾರತೀಯರದ್ದೇ ಮೇಲುಗೈ!
ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.

ಬೀಜಿಂಗ್: ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.
ಈ ಹಿಂದೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಭಾರತದ ಅಮನ್ ದೀಪ್ ಸಿಂಗ್ ಅವರು ಚೀನಾ ಬಾಕ್ಸಿಂಗ್ ಪ್ರೋ ಕ್ರೀಡಾಕೂಟದ 56 ಕೆಜಿ ವಿಭಾಗದ ಪಂದ್ಯದಲ್ಲಿ ಥೈಯ್ಲಾಂಡ್ ನ ಅನುಭವಿ ಬಾಕ್ಸರ್ ಪಾಕ್ಪೂಮ್ ಹ್ಯಾಮ್ಮರ್ಯಾಖ್ ರನ್ನು ಸೋಲಿಸಿದ್ದಾರೆ. ಪಾಕ್ಪೂಮ್ ಹ್ಯಾಮ್ಮರ್ಯಾಖ್ ಈ ವರೆಗೂ 27 ವೃತ್ತಿಪರ ಪಂದ್ಯಗಳನ್ನಾಡಿದ್ದು, ಈ ಪೈಕಿ 14 ಜಯ ಮತ್ತು 13 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
ಅಂತೆಯೇ ಭಾರತದ ಮತ್ತೋರ್ವ ಬಾಕ್ಸರ್ ಅಮನ್ ದೀಪ್ ಅವರು ಕೂಡ ರಾಷ್ಟ್ರ ಮಟ್ಟದ ಚಾಂಪಿಯನ್ ಆಗಿದ್ದು, ಬೀಜಿಂಗ್ ನಲ್ಲಿ ನಡೆದ 66 ಕೆಜಿ ವಿಭಾಗದ ಪಂದ್ಯದಲ್ಲಿ ಸಯನ್ ಸಿರಿಮೊಂಗ್ ಖೊನ್ ವಿರುದ್ಧ 4-0 ಅಂತರದಲ್ಲಿ ಜಯಗಳಿಸಿದ್ದಾರೆ. ಸಿರಿಮೊಂಗ್ ಖೊನ್ ಕೂಡ ಅನುಭವಿ ಬಾಕ್ಸರ್ ಆಗಿದ್ದು, ಒಟ್ಟು 24 ಪಂದ್ಯಗಳಲ್ಲಿ 12 ಸೋಲು ಹಾಗೂ 12 ಜಯ ಗಳಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ವೃತ್ತಿಪರ ಬಾಕ್ಸಿಂಗ್ ಗೆ ಪದಾರ್ಪಣೆ ಮಾಡಿರುವ ಭಾರತದ ಬಲ್ಕರ್ ಸಿಂಗ್ 69 ಕೆಜಿ ವಿಭಾಗದ ಪಂದ್ಯದಲ್ಲಿ ಥಾಯ್ ಮೂಲದ ಚುವೆಚಾನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚೀನಾ ಪ್ರೋ ಕ್ರೀಡಾಕೂಟದಲ್ಲಿ ಇಂದು ನಡೆದ ಎಲ್ಲ ಪಂದ್ಯಗಳಲ್ಲೂ ಭಾರತ ಜಯಗಳಿಸಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


