ಕ್ರೀಡೆ

ರಣಜಿ: ಪಾರ್ಥಿವ್‌ ಪಟೇಲ್‌ರ ಶತಕದಿಂದ ಚೊಚ್ಚಲ ಪದಕ ಗೆದ್ದ ಗುಜರಾತ್‌ ಪಡೆ

ನಿನ್ನೆ ಇಂದೋರ್ ನ ಹೊಲ್ಕರ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಮತ್ತು ಗುಜರಾತ್ ರಣಜಿ ಕ್ರಿಕೆಟ್ ತಂಡದ ಫೈನಲ್‌ ...

ರಣಜಿ: ಪಾರ್ಥಿವ್‌ ಪಟೇಲ್‌ರ ಶತಕದಿಂದ ಚೊಚ್ಚಲ ಪದಕ ಗೆದ್ದ ಗುಜರಾತ್‌ ಪಡೆ
ಪಾರ್ಥಿವ್ ಪಟೇಲ್ (ಸಂಗ್ರಹ ಚಿತ್ರ)
Published On :
ರಣಜಿ: ಪಾರ್ಥಿವ್‌ ಪಟೇಲ್‌ರ ಶತಕದಿಂದ ಚೊಚ್ಚಲ ಪದಕ ಗೆದ್ದ ಗುಜರಾತ್‌ ಪಡೆ
ನವದೆಹಲಿ: ನಿನ್ನೆ ಇಂದೋರ್ ನ ಹೊಲ್ಕರ್  ಸ್ಟೇಡಿಯಂನಲ್ಲಿ ನಡೆದ ಮುಂಬೈ ಮತ್ತು ಗುಜರಾತ್ ರಣಜಿ ಕ್ರಿಕೆಟ್ ತಂಡದ ಫೈನಲ್‌ ಪಂದ್ಯದಲ್ಲಿ  5 ವಿಕೆಟ್‌ಗಳಿಂದ ಜಯಿಸಿದ ಪಾರ್ಥಿವ್‌ ಪಟೇಲ್‌ ನಾಯಕತ್ವದ ಗುಜರಾತ್‌ ತಂಡ ಮೊತ್ತ ಮೊದಲ ಬಾರಿಗೆ ರಣಜಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಸಂಭ್ರಮಿಸಿದೆ. 
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಜರಾತ್‌ ಎದುರಾಳಿ  ಮುಂಬೈ ತಂಡಕ್ಕೆ ಪ್ರಬಲ ಪೈಪೋಟಿ ನೀಡಿ  ಭರ್ಜರಿ ಗೆಲುವು ಸಾಧಿಸಿದೆ. 
ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್‌ ಮಾತ್ರ ಗಳಿಸಿದ್ದ  ಮುಂಬಯಿ 2ನೇ ಇನಿಂಗ್ಸ್‌ನಲ್ಲಿ 411 ರನ್‌ ಗಳಿಸಿ ಆಲೌಟಾಗಿತ್ತು. ಪ್ರಶಸ್ತಿ ಗೆಲ್ಲಲು  312 ರನ್‌ ಗಳಿಸುವ ಕಠಿಣ ಗುರಿ ಪಡೆದ ಗುಜರಾತ್‌ 5 ವಿಕೆಟ್‌ ಉಳಿಸಿಕೊಂಡು ಗುರಿ ತಲುಪಿ ಸಂಭ್ರಮಿಸಿತು. 
ಮಂದ ಬೆಳಕಿನಿಂದಾಗಿ ನಾಲ್ಕನೇ ದಿನದಾಟ ಬೇಗ ಅಂತ್ಯಗೊಂಡಾಗ ಗುಜರಾತ್‌ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 47 ರನ್‌ ಗಳಿಸಿತ್ತು. ಶನಿವಾರ ಭರ್ಜರಿ ಆಟವಾಡಿದ ಬ್ಯಾಟ್ಸ್‌ಮನ್‌ಗಳು ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. 
ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ ಕೊಡುಗೆ ಸಲ್ಲಿಸಿದ್ದ ಪಾರ್ಥಿವ್‌ ಪಟೇಲ್‌ 2 ನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.143 ರನ್‌ಗಳಿಸಿ ಔಟಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.