ಪೇಸ್ ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಒಬ್ಬರು: ರಾಫೆಲ್ ನಡಾಲ್
ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.

ನವದೆಹಲಿ: ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.
ಡೇವಿಸ್ ಕಪ್ ಪ್ಲೇಆಫ್ ಸುತ್ತಿನಲ್ಲಿ ಶನಿವಾರ ಭಾರತ ತಂಡದ ವಿರುದ್ಧ ನಡೆದ ಪಂದ್ಯ ಜಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನಡಾಲ್, ಲಿಯಾಂಡರ್ ಪೇಸ್ ಡಬಲ್ಸ್ ನಲ್ಲಿ ಅದ್ಬುತ ಆಟಗಾರ. ಅಂತೆಯೇ ಟೆನಿಸ್ ಲೋಕದ ದಿಗ್ಗಜ ಆಟಗಾರ ಎಂದು ಬಣ್ಣಿಸಿದ್ದಾರೆ.
ಪ್ಲೇ ಆಫ್ ಸುತ್ತಿನಲ್ಲಿ ಭಾರತ ಸೋತಿತಾದರೂ, ಆ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಪ್ರಮುಖವಾಗಿ ಭಾರತ ತಂಡದ ಲಿಯಾಂಡರ್ ಪೇಸ್ ನಮಗೆ ನಿಜಕ್ಕೂ ಪ್ರಬಲ ಎದುರಾಳಿಯಾಗಿದ್ದರು. ಟೆನ್ನಿಸ್ ಲೋಕದ ದೊಡ್ಡ ತಾರೆಗಳಲ್ಲಿ ಪೇಸ್ ಕೂಡ ಒಬ್ಬರು. ಅವರೊಂದಿಗೆ ಕೋರ್ಟ್ ಹಂಚಿಕೊಂಡಿದ್ದು ನನಗೆ ನಿಜಕ್ಕೂ ಗೌರವದ ಕ್ಷಣವಾಗಿತ್ತು ಎಂದು 14 ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ನಡಾಲ್ ಹೇಳಿದ್ದಾರೆ.
ಡೇವಿಸ್ ಕಪ್ ನಿಮಿತ್ತ ಶನಿವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಭಾರತ ಲಿಯಾಂಡರ್ ಪೇಸ್ ಹಾಗೂ ಸಾಕೇತ್ ಮೈನೇನಿ ಅವರು ಸ್ಪೈನ್ ನ ರಾಫೆಲ್ ನಡಾಲ್, ಮಾರ್ಕ್ ಲೊಪೇಜ್ ವಿರುದ್ಧ 4-6, 7-6 (2), 6-4, 6-4 ಸೆಟ್ ಗಳ ಅಂತರದಿಂದ ಸೋತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


