ಕ್ರೀಡೆ

ಹೊಟ್ಟೆ ನೋವಿನಿಂದ ಡೇವಿಸ್ ಕಪ್‌ ಸಿಂಗಲ್ಸ್‌ನಿಂದ ಹೊರಬಿದ್ದ ಸ್ಟಾರ್ ಆಟಗಾರ ನಡಾಲ್

ಡೇವಿಸ್ ಕಪ್ ಪಂದ್ಯಾವಳಿಯ ವಿಶ್ವ ಗುಂಪಿನ ಫ್ಲೇ ಆಫ್ ನ ಸಿಂಗಲ್ಸ್ ನಲ್ಲಿ ಸ್ಪೇನ್ ನ ದೈತ್ಯ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ಹೊಟ್ಟೆ ನೋವಿನಿಂದಾಗಿ ಪಂದ್ಯದಿಂದ...

ಹೊಟ್ಟೆ ನೋವಿನಿಂದ ಡೇವಿಸ್ ಕಪ್‌ ಸಿಂಗಲ್ಸ್‌ನಿಂದ ಹೊರಬಿದ್ದ ಸ್ಟಾರ್ ಆಟಗಾರ ನಡಾಲ್
ರಫೆಲ್ ನಡಾಲ್
Published On :
ನವದೆಹಲಿ: ಡೇವಿಸ್ ಕಪ್ ಪಂದ್ಯಾವಳಿಯ ವಿಶ್ವ ಗುಂಪಿನ ಫ್ಲೇ ಆಫ್ ನ ಸಿಂಗಲ್ಸ್ ನಲ್ಲಿ ಸ್ಪೇನ್ ನ ದೈತ್ಯ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ಹೊಟ್ಟೆ ನೋವಿನಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದು, ನಡಾಲ್ ವಿರುದ್ಧ ಸೆಣಸಬೇಕಿದ್ದ ಭಾರತದ ರಾಮ್‌​ಕು​ಮಾರ್‌ ರಾಮ​ನಾ​ಥನ್ ಫೆಲಿಸಿಯಾನೋ ಲೋಪೇಜ್ ರೊಂದಿಗೆ ಸೆಣಸಲಿದ್ದಾರೆ. 
ರಫಲ್ ನಡಾಲ್ ಮತ್ತು ರಾಮ್‌​ಕು​ಮಾರ್‌ ರಾಮ​ನಾ​ಥನ್ ಅವರ ನಡುವಿನ ಪಂದ್ಯ ಸಂಜೆ 5 ಗಂಟೆಗೆ ಶುರುವಾಗಬೇಕಿತ್ತು. ಆದರೆ ನಡಾಲ್ ಹೊಟ್ಟೆ ನೋವಿನಿಂದ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ರಾಮ್‌​ಕು​ಮಾರ್‌ ರಾಮ​ನಾ​ಥನ್ ಫೆಲಿಸಿಯಾನೋ ಲೋಪೇಜ್ ಅವರೊಂದಿಗೆ ಸೆಣಸಲಿದ್ದಾರೆ. 
ಇನ್ನು ಸಿಂಗಲ್ಸ್ ವಿಭಾಗದ ಎರಡನೇ ಪಂದ್ಯ ಸಾಕೇತ್ ಮೈನೇನಿ ಮತ್ತು ವಿಶ್ವದ 13ನೇ ಶ್ರೇಯಾಂಕದ ಡೇವಿಡ್ ಫೆರರ್ ಜತೆ ಸೆಣಸಲಿದ್ದಾರೆ. 
ಇನ್ನು ಸೆಪ್ಟೆಂಬರ್ 17ರಂದು ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಮತ್ತು ಸಾಕೇತ್ ಮೈನೇನಿ ಸ್ಪೇನ್ ನ ಮಾರ್ಕ್ ಲೋಪೇಜ್ ಮತ್ತು ಫೆಲಿಸಿಯಾನೊ ಲೋಪೇಜ್ ಜತೆ ಸೆಣಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.