10 ಸಾವಿರ ರನ್ ಪೂರೈಸಿದ ಮೊಹಮ್ಮದ್ ಕೈಫ್‌ಗೆ ಸೆಹ್ವಾಗ್ ಶುಭಾಶಯ
ಕ್ರಿಕೆಟ್ ಬದುಕಿನಲ್ಲಿ 10 ಸಾವಿರ ರನ್ ಪೂರೈಸಿದ ಮೊಹಮ್ಮದ್ ಕೈಫ್ ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶುಭಾಶಯ ತಿಳಿಸಿದ್ದಾರೆ...

Published On :
ಕ್ರಿಕೆಟ್ ಬದುಕಿನಲ್ಲಿ 10 ಸಾವಿರ ರನ್ ಪೂರೈಸಿದ ಮೊಹಮ್ಮದ್ ಕೈಫ್ ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶುಭಾಶಯ ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯ ಛತ್ತೀಸ್ಗಢ್ ತಂಡದ ನಾಯಕನಾಗಿರುವ ಮೊಹಮ್ಮದ್ ಕೈಫ್ 27 ರನ್ ಪೂರೈಸುವುದರೊಂದಿಗೆ 10 ಸಾವಿರ ರನ್ ಗಡಿ ದಾಟಿದರು. ಕೈಫ್ ರ ಈ ಸಾಧನೆಗೆ ಟ್ವೀಟರ್ ನಲ್ಲಿ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬರುತ್ತಿದ್ದು ಈ ನಡುವೆ ಸೆಹ್ವಾಗ್ ಕೂಡ ಮೊಹಮ್ಮದ್ ಕೈಫ್ ಗೆ ಶುಭಾಶಯ ತಿಳಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಮೊಹಮ್ಮದ್ ಕೈಫ್ ಸಾಧನೆ ಕುರಿತಂತೆ ಪ್ರಥಮ ದರ್ಜೆಯಲ್ಲಿ 10 ಸಾವಿರ ರನ್ ಪೂರೈಸಿದ್ದೀರಾ. 9 ಸಾವಿರ ರನ್ ಓಡಿ ಓಡಿ ಕಲೆ ಹಾಕಿದ್ದೀರಾ, ಓಡುವುದು ನಿಮ್ಮ ಎರಡನೇ ನೆಚ್ಚಿನ ಆಟನಾ? ಎಂದು ಟ್ವೀಟಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮೊಹಮ್ಮದ್ ಕೈಫ್ ಸಹ ರಿಟ್ವೀಟ್ ಮಾಡಿದ್ದು, ಹ್ಹ ಹ್ಹ ಹ್ಹ, ಧನ್ಯವಾದಗಳು ವೀರು. ನಿಮ್ಮ ರೀತಿ ಸಿಕ್ಸರ್, ಬೌಂಡರಿ ಗಳಿಂದ ಶೇಕಡ 80 ರಷ್ಟು ರನ್ ಮಾಡುವುದು, ಅಥವಾ ಬೌಂಡರಿಗಳಿಂದಲೇ 300 ರನ್ ಸಿಡಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಟ್ವೀಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Twitterಟ್ವೀಟರ್Virender Sehwagವೀರೇಂದ್ರ ಸೆಹ್ವಾಗ್ಸ್ವಾರಸ್ಯOffbeatMohammad Kaifಮೊಹಮ್ಮದ್ ಕೈಫ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


