ಕ್ರೀಡೆ

ಬೆಂಗಳೂರು ತಂಡದ ಸೆಮಿಫೈನಲ್ ಕನಸು ಭಗ್ನ

ಈ ಬಾರಿಯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಪಿಬಿಎಲ್) ಪಂದ್ಯಾವಳಿಯ ಸೆಮಿಫೈ ನಲ್‍ಗೆ ಲಗ್ಗೆಯಿಡುವ ಬೆಂಗಳೂರು ಟಾಪ್ ಗನ್ಸ್ ತಂಡದ ಕನಸು ಭಗ್ನಗೊಂಡಿದೆ...

ಬೆಂಗಳೂರು ತಂಡದ ಸೆಮಿಫೈನಲ್ ಕನಸು ಭಗ್ನ
ಬ್ಯಾಡ್ಮಿಂಟನ್
Published On :

ಬೆಂಗಳೂರು: ಈ ಬಾರಿಯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಪಿಬಿಎಲ್) ಪಂದ್ಯಾವಳಿಯ ಸೆಮಿಫೈ ನಲ್‍ಗೆ ಲಗ್ಗೆಯಿಡುವ ಬೆಂಗಳೂರು ಟಾಪ್ ಗನ್ಸ್ ತಂಡದ ಕನಸು ಭಗ್ನಗೊಂಡಿದೆ. ಅಂಕಪಟ್ಟಿಯಲ್ಲಿ ಕೆಳ ಕ್ರಮಾಂಕದಲ್ಲಿದ್ದ ಟಾಪ್ ಗನ್ಸ್ ಪಾಲಿಗೆ ನಿರ್ಣಾಯಕವಾಗಿದ್ದ ಚೆನ್ನೈ ಸ್ಮಾಷರ್ಸ್ ವಿರುದ್ಧದ ಪಂದ್ಯದಲ್ಲಿ 2-3 ಅಂತರದಲ್ಲಿ ಸೋಲು ಕಂಡ ಬೆಂಗಳೂರು ಪಡೆ, ಈ ಬಾರಿಯ ಟೂರ್ನಿಯಲ್ಲಿ ತನ್ನ ಸವಾಲನ್ನು ಅಂತ್ಯಗೊಳಿಸಿತು. ಈ ಸೋಲಿನೊಂದಿಗೆ ಈವರೆಗೆ ಟೂರ್ನಿ ಯಲ್ಲಿ ಆಡಿದ ಒಟ್ಟು 25 ಪಂದ್ಯಗಳಿಂದ ಕೇವಲ 9 ಅಂಕ ಪಡೆದ ಬೆಂಗಳೂರು ಅಂಕಪ ಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಗುರುವಾರ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಡೆಲ್ಲಿ ಏಸರ್ಸ್ ಹಾಗೂ ಚೆನ್ನೈಸ್ಮಾಷರ್ಸ್ ಸೆಣಸಲಿದ್ದು, ಶುಕ್ರವಾರ ನಡೆಯಲಿರುವ 2ನೇ ಸೆಮಿಫೈನಲ್ನಲ್ಲಿ ಮುಂಬೈ ರಾಕೆಟ್ಸ್ ಹಾಗೂ ಅವದ್ ವಾರಿಯರ್ಸ್ ಕಣಕ್ಕಿಳಿಯಲಿವೆ. ಬೆಂಗಳೂರು ವಿರುದ್ಧದ ಮೊದಲ ಪಂದ್ಯ ವನ್ನು ತನ್ನ ಟ್ರಂಪ್ ಪಂದ್ಯವನ್ನಾಗಿ ಆಯ್ದು ಕೊಂಡ ಚೆನ್ನೈ, ಆ ಪಂದ್ಯದಲ್ಲಿ ಜಯ ಸಾಧಿಸಿ ಬೋನಸ್ ಅಂಕ ಪಡೆದಿದ್ದು ಬೆಂಗಳೂರು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಮೊದಲ ಪಂದ್ಯದಲ್ಲಿನ ಸೋಲಿನಿಂದಾಗಿ ಆನಂತರ ನಡೆಯಬೇಕಿದ್ದ, ಸ್ಮಾಷರ್ಸ್ ವಿರು ದ್ಧದ ಎಲ್ಲಾ ಪಂದ್ಯಗಳನ್ನೂ ಗೆದ್ದು ಬೋನಸ್ ಅಂಕ ಸಹಿತ ಐದು ಅಂಕಗಳನ್ನು ಪೇರಿಸುವ ಒತ್ತಡದಲ್ಲಿ ಬೆಂಗಳೂರು ತಂಡ ಸಿಲುಕಿತು. ಆದರೆ, ಈ ಸವಾಲನ್ನು ಮೆಟ್ಟುವಲ್ಲಿ ವಿಫಲ ವಾದ ಅದು ಸ್ಮಾಷರ್ಸ್ ವಿರುದ್ಧ ಸೋಲಿಗೆ ಶರಣಾಯಿತು. ಚೆನ್ನೈ ಪಾಲಿನ ಟ್ರಂಪ್ ಪಂದ್ಯವಾದ ಮೊದಲ ಮುಖಾಮುಖಿಯಲ್ಲಿ ಸ್ಮಾಷರ್ಸ್‍ನ ಸೋನಿ ಡ್ವಿ ಕುಕೊರೊ, ಬೆಂಗಳೂರು ತಂಡದ ಸಮೀರ್ ವರ್ಮಾ ಅವರನ್ನು 15-10, 10-15, 15-8 ಸೆಟ್ಗಳ ಅಂತರದಲ್ಲಿ ಸೋಲಿಸಿದರು. ಇದಾದ ನಂತರ, ನಡೆದ ಪುರುಷ ಡಬಲ್ಸ್ನಲ್ಲಿ ಬೆಂಗಳೂರು ತಂಡದ ಹೂನ್ ಥಿಯಾನ್ ಹಾಗೂ ನೀಲ್ಸಿ ಜೋಡಿ, ಕ್ರಿಸ್ ಹಾಗೂ ಪ್ರಣವ್ ಜೋಡಿಯನ್ನು 15-7, 15-8 ಸೆಟ್ಗಳಲ್ಲಿ ಸೋಲಿಸಿ ತಮ್ಮ ತಂಡದ ಅಂಕದ ಖಾತೆ ತೆರೆದರು. ಮತ್ತೊಂದು ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್,ಚೆನ್ನೈನ ಬ್ರೈಸ್ ಲೆವೆರ್ಡೇಸ್ ವಿರುದ್ಧ 15-4, 15-12 ಸೆಟ್ಗಳಲ್ಲಿ ಗೆಲವು ಪಡೆದರು. ಆದರೆ, ಆನಂತರ ನಡೆದ ಮಹಿಳೆಯರ ಸಿಂಗಲ್ಸ್‍ನಲ್ಲಿ ಚೆನ್ನೈ ತಂಡದ ಸಿಂಧು, ಬೆಂಗಳೂರು ತಂಡದ ಸುವೊ ಡಿ ಅವರನ್ನು ಮಣಿಸಿ ದರೆ, ಆನಂತರ ನಡೆದ ಮಿಶ್ರ ಡಬಲ್ಸ್ ಮುಖಾಮುಖಿಯಲ್ಲಿ, ಚೆನ್ನೈನ ಜೋಡಿ ಯಾದ ಕ್ರಿಸ್ ಪಿಯಾ ಝೆಬಾದೆಯï, ಬೆಂಗಳೂರು ತಂಡದ ಅಶ್ವಿನಿ ಪೊನ್ನಪ್ಪ ಜೊಯಾಕ್ವಿಮ್ ಜೋಡಿ ವಿರುದ್ಧ ಗೆಲವು ಕಂಡಿತು. ಡೆಲ್ಲಿಗೆ ಭರ್ಜರಿ ಜಯ ಇನ್ನು ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಡೆಲ್ಲಿ ಏಸರ್ಸ್ ತಂಡ 4-1ರಿಂದ ಮುಂಬೈ ರಾಕೆಟ್ಸ್ ವಿರುದ್ಧ ಗೆಲುವು ಪಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.