ನಿವೃತ್ತಿ ಸುದ್ದಿ: ಮಾಧ್ಯಮ ವರದಿಯನ್ನು ಒಪ್ಪಿಕೊಂಡ ಎಬಿ ಡಿವಿಲಿಯರ್ಸ್
ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿದ್ದ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿಯ ವರದಿ ಸ್ವಲ್ಪ ಸತ್ಯ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ...

ಜೊಹಾನ್ಸ್‍ಬರ್ಗ್: ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿದ್ದ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿಯ ವರದಿ ಸ್ವಲ್ಪ ಸತ್ಯ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಒಪ್ಪಿಕೊಂಡಿದ್ದಾರೆ. ಆ ಮೂಲಕ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶೀಘ್ರದಲ್ಲಿ ವಿದಾಯ ಹೇಳುವುದು ಬಹುತೇಕ ಖಚಿತವಾಗುತ್ತಿದೆ. ಆದರೆ ಡಿವಿಲಿಯರ್ಸ್ ಯಾವ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಪಡೆಯಲಿದ್ದಾರೆ. ಅಥವಾ ಎಲ್ಲಾ ಮಾದರಿಗೂ ವಿದಾಯ ಹೇಳುವರೇ ಎಂಬುದು ಮಾತ್ರ ತಿಳಿದು ಬಂದಿಲ್ಲ. 'ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ.ಆಫ್ರಿಕಾ ತಂಡದ ನಾಯಕ ಸ್ಥಾನದಿಂದ ಹಾಶೀಂ ಆಮ್ಲಾ ಕೆಳಗಿಳಿದಿರುವು ದರಿಂದ, ಮುಂದಿನ ಎರಡು ಪಂದ್ಯಗಳಿಗೆ ತಂಡದ ಜವಾಬ್ದಾರಿ ನಿರ್ವಹಿಸಲು ಸಿದ್ಧನಾಗಿದ್ದೇನೆ. ಆದರೆ ನಿವೃತ್ತಿಯ ಕುರಿತ ವರದಿಗಳು ಸಂಪೂರ್ಣ ಸುಳ್ಳಲ್ಲ'' ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. 'ಆಗಾಗ್ಗೆ ನನ್ನ ಆಟವನ್ನು ನಾನು ಆನಂದಿಸುತ್ತಿಲ್ಲವೆಂಬ ಭಾವನೆ ಮೂಡುತ್ತಿದೆ. ಈ ಬಗ್ಗೆ ನನ್ನ ಆಪ್ತರ ಜತೆ ಚರ್ಚಿಸಿದ್ದೇನೆ. ಹಾಗಾಗಿ ಈ ವಿಷಯ ಸೋರಿಕೆಯಾಗುವುದು ಸಹಜ. ಆದರೆ, ಈಗಲೂ ನಾನು ಪೂರ್ಣ ಪ್ರಮಾಣದೊಂದಿಗೆ ಆಡುತ್ತಿದ್ದೇನೆ. ಸದ್ಯ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿವೆ. ಅದರ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದೇನೆ'' ಎಂದು ಡಿವಿಲಿಯರ್ಸ್ ತಿಳಿಸಿರುವುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸರಣಿ ಮೇಲೆ ಕುಕ್ ಕಣ್ಣು: ಏತನ್ಮಧ್ಯೆ ಗುರುವಾರದಿಂದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭವಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಅದರೊಂದಿಗೆ ಸರಣಿಯನ್ನು ಜಯಿಸುವ ಗುರಿ ಹೊತ್ತಿರುವುದಾಗಿ ಪ್ರವಾಸಿ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟೈರ್ ಕುಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


