ಸದ್ಯಕ್ಕೆ ಮದುವೆಯ ಆಲೋಚನೆಯೂ ಇಲ್ಲ: ಸೈನಾ ನೆಹ್ವಾಲ್
ನನಗೇನೂ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣು ಮಕ್ಕಳೂ ಮದುವೆಯಾಗಬೇಕು. ಆದರೆ ಪ್ರಸ್ತುತ ನಾನು ಮದುವೆ ಕುರಿತು ಯೋಚನೆಯನ್ನೂ ಕೂಡ ಮಾಡಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ...

ಬೆಂಗಳೂರು: ನನಗೇನೂ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣು ಮಕ್ಕಳೂ ಮದುವೆಯಾಗಬೇಕು. ಆದರೆ ಪ್ರಸ್ತುತ ನಾನು ಮದುವೆ ಕುರಿತು ಯೋಚನೆಯನ್ನೂ ಕೂಡ ಮಾಡಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ.
ಪ್ರಸ್ತುತ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮೇಲೆ ತಮ್ಮ ದೃಷ್ಟಿ ನೆಟ್ಟಿರುವ ಸೈನಾ ನೆಹ್ವಾಲ್ ಅವರು ಸೋಮವಾರ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದರು. "ಗಾಯವಿಲ್ಲದೇ ಟೂರ್ನಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದುಕೊಂಡಿದ್ದೇನೆ. ಕೊನೆಯ ಬಾರಿ ಕಂಚಿನ ಪದಕ ಗೆದ್ದಿದ್ದೆ. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವುದು ನನ್ನ ಬಯಕೆಯಾಗಿದೆ. ಇದಕ್ಕಾಗಿ ಸಾಕಷ್ಟು ತರಬೇತಿ ಪಡೆಯುತ್ತಿದ್ದೇನೆ. ಸತತ ಮೂರನೇ ಬಾರಿಗೆ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವುದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವಿಚಾರ. ಆದರೆ ಸರಣಿ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ನನ್ನ ಸಂಪೂರ್ಣ ಶ್ರಮವನ್ನು ಹಾಕಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮದುವೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೈನಾ, ಸಾನಿಯಾ ಮಿರ್ಜಾ, ಕಿಮ್ ಕ್ಲೈಸ್ಟರ್ಸ್ ರಂಥ ಟೆನ್ನಿಸ್ ಆಟಗಾರ್ತಿಯರು ಮದುವೆಯಾದ ಬಳಿಕ ವೃತ್ತಿಜೀವನದ ಉತ್ತುಂಗ ಫಾರ್ಮ್‌ಗೇರಿದ್ದಾರೆ. ಆದರೂ ಸದ್ಯಕ್ಕೆ ನನಗೆ ಮದುವೆಯ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ‘ಸಾನಿಯಾ, ಕ್ಲೈಸ್ಟರ್ಸ್ ಅಲ್ಲದೆ, ಬಹುತೇಕ ಆಟಗಾರ್ತಿಯರು ಮದುವೆಯಾದ ಬಳಿಕ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಆದರೆ, ನನ್ನ ಮಟ್ಟಿಗೆ ಸದ್ಯದಲ್ಲಿ ಮದುವೆಯಾಗುವ ಯೋಚನೆಯನ್ನೇ ಮಾಡಿಲ್ಲ. ಹಾಗಂತ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣುಮಕ್ಕಳು ಮದುವೆಯಾಗಬೇಕು. ಆದರೆ, ಅದಕ್ಕಿನ್ನೂ ನನಗೆ ಸೂಕ್ತ ಸಮಯ ಬಂದಿಲ್ಲ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


