ಬಾಂಗ್ಲಾ ಮಣಿಸಿ ಟೀಂ ಇಂಡಿಯಾ ಏಷ್ಯಾಕಪ್ಗೆ ಶುಭಾರಂಭ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ...

ಮೀರ್ಪುರ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ.
ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ಗೆ 166ರನ್ ಪೇರಿಸಿದರೆ, 167 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 121ರನ್ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಭಾರತ 45 ರನ್ ಗಳಿಂದ ಜಯ ಗಳಿಸಿತು.
ಬಾಂಗ್ಲಾ ಪರ ಸೌಮ್ಯಾ ಸರ್ಕಾರ್ 11, ಮೊಹಮ್ಮದ್ ಮಿಥುನ್ 1, ಶಬೀರ್ ರಹಮನ್ 44, ಇಮ್ರುಲಾ ಕೀಸ್ 14, ಶಕೀಬ್ ಅಲ್ ಹಸನ್ 3, ಮಹಮುದುಲ್ಲಾ 7, ಮುಶ್ರಾಫೆ ಮೋರ್ಟಾಝಾ 0, ಹಾಗೂ ಮುಷ್ಫಿಕುರ್ ರಹೀಮ್ ಅಜೇಯ 16, ಟಸ್ಕಿನ್ ಅಹಮದ್ 15 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ಪರ ಆಶೀಶ್ ನೆಹ್ರಾ 3, ಬುಮ್ರಾ, ಪಾಂಡ್ಯಾ, ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಭಾರತ ಪರ ರೋಹಿತ್ ಶರ್ಮಾ 83, ಶಿಖರ್ ಧವನ್ 2, ವಿರಾಟ್ ಕೊಹ್ಲಿ 8, ಸುರೇಶ್ ರೈನಾ 13, ಯುವರಾಜ್ ಸಿಂಗ್ 15, ಹಾರ್ದಿಕ್ ಪಾಂಡ್ಯಾ 31 ಹಾಗೂ ಎಂಎಸ್ ಧೋನಿ ಅಜೇಯ 8, ರವೀಂದ್ರ ಜಡೇಜಾ 0 ರನ್ ಗಳಿಸಿದ್ದಾರೆ.
ಬಾಂಗ್ಲಾ ಪರ ಅಲ್ ಅಮೀನ್ ಹುಸೈನ್ 3, ಮೋರ್ಟೋಝಾ, ಮಹಮ್ಮದುಲ್ಲಾ, ಶಕೀಬ್ ಅಲ್ ಹಸನ್ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


