ಕ್ರೀಡೆ

ನನ್ನಿಂದ ದೊಡ್ಡ ಸಿಕ್ಸ್ ಗಳನ್ನು ಹೊಡೆಯೋಕ್ಕೆ ಆಗುವುದಿಲ್ಲ: ವಿರಾಟ್ ಕೊಹ್ಲಿ

ದೊಡ್ಡ ಸಿಕ್ಸ್ ಗಳನ್ನು ಹೊಡೆಯಲು ತನ್ನಿಂದ ಸಾಧ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನನ್ನಿಂದ ದೊಡ್ಡ ಸಿಕ್ಸ್ ಗಳನ್ನು ಹೊಡೆಯೋಕ್ಕೆ ಆಗುವುದಿಲ್ಲ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published On :

ಮಿರ್‌ಪುರ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲರುಗಳಿಗೆ ಮೈಚಳಿ ಹುಟ್ಟಿಸುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಆದರೆ ತಮ್ಮ ಆಟದಲ್ಲಿರುವ ಒಂದು ದೌರ್ಬಲ್ಯವನ್ನು ವಿರಾಟ್ ಕೊಹ್ಲಿ ಅವರೇ ಬಾಯಿಬಿಟ್ಟು ಹೇಳಿದ್ದಾರೆ. ದೊಡ್ಡ ಸಿಕ್ಸರುಗಳನ್ನು ಹೊಡೆಯಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟಿ 20ಯ ಆರಂಭದ ದಿನಗಳಲ್ಲಿ 10 ಎಸೆತಗಳಲ್ಲಿ 10 ರನ್ ಬಾರಿಸುವುದು ನನ್ನ ಆಟದ ಯೋಜನೆಯಾಗಿತ್ತು. ಆದರೆ ದೊಡ್ಡ ಸಿಕ್ಸ್ ಗಳನ್ನು ಬಾರಿಸುವ ರೀತಿಯಲ್ಲಿ ತಾನು ಶಾಟ್ ಹೊಡೆಯುವುದಿಲ್ಲವೆಂದು ಅರಿತುಕೊಂಡೆ. ದೊಡ್ಡ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲವೆಂಬ ಸತ್ಯವನ್ನು ಒಪ್ಪಿಕೊಂಡು ಬೌಂಡರಿಗಳ ಮೇಲೆ ಗಮನಹರಿಸಿದೆ ಎಂದು ಕೊಹ್ಲಿ ಬಾಂಗ್ಲಾದೇಶದ ವಿರುದ್ದ ಇಂದು ನಡೆಯುವ ಏಷ್ಯಾ ಕಪ್ ಆರಂಭದ ಪಂದ್ಯಕ್ಕೆ ಮುನ್ನ ತಿಳಿಸಿದ್ದಾರೆ.

ಭಾರತ ಏಷ್ಯಾ ಕಪ್‌ನಲ್ಲಿ ಉತ್ತಮ ಲಯದೊಂದಿಗೆ ಆಡುತ್ತಿದೆ. ಆದರೆ ನಾವು ಅತಿಯಾದ ವಿಶ್ವಾಸ ಹೊಂದದೇ ಪ್ರತಿಯೊಂದು ಎದುರಾಳಿ ತಂಡವನ್ನು ನಿಕೃಷ್ಟವಾಗಿ ಕಾಣದೇ ಆಡಬೇಕು ಎಂದು ಕೊಹ್ಲಿ ಹೇಳಿದರು.

ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವ ಬೌಲರುಗಳಿರುವುದು ಆಟಕ್ಕೆ ಬಹಳ ಮುಖ್ಯವಾಗಿದೆ. ಇದು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಕೊಹ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.