ಫೆಡರರ್, ಹಾಲೆಪ್ ಸೆಮಿಗೆ
ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಯುಎಸ್ ಓಪನ್ ಪಂದ್ಯಾವಳಿಯಲ್ಲಿನ ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದ್ದು, ಅಂತಿಮ..

ನ್ಯೂಯಾರ್ಕ್: ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಯುಎಸ್ ಓಪನ್ ಪಂದ್ಯಾವಳಿಯಲ್ಲಿನ ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದ್ದು, ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದ್ದರೆ, ಮಹಿಳೆಯರ ವಿಭಾಗದಲ್ಲಿ ಬೆಲಾರಸ್‍ನ ವಿಕ್ಟೋರಿಯಾ ಅಜರೆಂಕಾಗೆ ಸೋಲುಣಿಸಿದ ರೊಮೇನಿಯಾದ ಸಿಮೋನಾ ಹಾಲೆಪ್ ಸೆಮಿಫೈನಲ್‍ಗೆ ಅರ್ಹತೆ ಪಡೆದರು.
ಇತ್ತ ವರ್ಷದ ಕಟ್ಟಕಡೆಯ ಗ್ರಾಂಡ್ ಸ್ಲಾಮ್ ಟೂರ್ನಿಯ 10ನೇ ದಿನದಂದು ಭಾರತದ ಇಬ್ಬರು ಫೈನಲ್ ತಲುಪುವಲ್ಲಿ ಯಶಸ್ವಿಯಾದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ರೋಜರ್, ವಾವ್ರಿಂಕಾಗೆ ಸುಲಭ ಜಯ ಬುಧವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್‍ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ 12ನೇ ಶ್ರೇಯಾಂಕಿತ ಆಟಗಾರ ಫ್ರಾನ್ಸ್ ನ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ 63, 63, 61 ನೇರ ಸೆಟ್‍ಗಳ ಸುಲಭ ಗೆಲುವಿನೊಂದಿಗೆ ಉಪಾಂತ್ಯಕ್ಕೆ ಲಗ್ಗೆ ಹಾಕಿದರೆ, ಮತ್ತೊಂದು ಕ್ವಾರ್ಟರ್ಫೈನಲ್‍ನಲ್ಲಿ ಐದನೇ ಶ್ರೇಯಾಂಕಿತ ವಾವ್ರಿಂಕಾ ದ.ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ 64, 64, 60 ಸೆಟ್‍ಗಳಿಂದ ಜಯಿಸಿ ಫೆಡರರ್ ವಿರುದ್ಧದ ನಾಲ್ಕರ ಘಟ್ಟದ ಪಂದ್ಯಕ್ಕೆ ಅರ್ಹತೆ ಪಡೆದರು.
ಕ್ವಿಟೋವಾ, ಅಜರೆಂಕಾಗೆ ಸೋಲು
ಮಹಿಳೆಯರ ವಿಭಾಗದಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಹಾಗೂ ಬೆಲಾರಸ್‍ನ ವಿಕ್ಟೋರಿಯಾ ಅಜರೆಂಕಾ ಸೋತು ಹೊರಬಿದ್ದಿದ್ದಾರೆ. ಮೊದಲಿಗೆ 26ನೇ ಶ್ರೇಯಾಂಕಿತ ಆಟಗಾರ್ತಿ ಇಟಲಿಯ ಫ್ಲಾವಿಯಾ ಪೆನೆಟ್ಟಾ 5ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಎದುರು ಮೊದಲ ಸೆಟ್‍ನಲ್ಲಿ 46ರ ಹಿನ್ನಡೆ ಅನುಭವಿಸಿಯೂ, ತದನಂತರದ ಎರಡೂ ಸೆಟ್‍ಗಳಲ್ಲಿ 64, 62ರಿಂದ ಜಯ ಸಾಧಿಸಿದರೆ, ಮತ್ತೊಂದು ಕ್ವಾರ್ಟರ್ಫೈನಲ್‍ನಲ್ಲಿ ಅಜರೆಂಕಾ ಎದುರು ಸಿಮೋನಾ ಹಾಲೆಪ್ 63, 46, 64 ಸೆಟ್ ಗಳಿಂದ ಗೆಲುವು ಪಡೆದರು. ಸೆಮಿಫೈನಲ್‍ನಲ್ಲಿ ಅವರೀಗ ಸೆರೆನಾ ವಿಲಿಯಮ್ಸ್ ವಿರುದ್ಧ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


