ಪೇಸ್‍ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?
ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ...

ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ.
ಸುದೀರ್ಘ 25 ವರ್ಷಗಳ ವೃತ್ತಿ ಜೀವನದಲ್ಲಿ ಪೇಸ್ 700ನೇ ಜಯ ಸಂಪಾದಿಸಿದ್ದಾರೆ. ಈವರೆಗೆ 99 ಜತೆಗಾರರೊಂದಿಗೆ ಆಡಿರುವ ಪೇಸ್‍ಗೆ 100ನೇ ಜತೆಗಾರ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ.
ಬುಧವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾದ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್ ತಮ್ಮ 99ನೇ ಜತೆಗಾರ ಡೇನಿಯಲ್ ನೆಸ್ಟರ್ ಜತೆಗೆ, ಗೆಲವು ದಾಖಲಿಸಿದ್ದು ಅವರ ಡಬಲ್ಸ್ ವೃತ್ತಿಜೀವನದ 700ನೇ ಗೆಲುವಾಗಿತ್ತು.
ಇದೀಗ 100ನೇ ಜತೆಗಾರ ಯಾರಾಗುವರು ಎಂಬ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಪೇಸ್ ಅವರು ರೋಜರ್ ಫೆಡರರ್ 100ನೇ ಜತೆಗಾರನಾಗಲಿದ್ದಾರೆ ಎಂಬ ಗಾಳಿಸುದ್ದಿಯಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಸ್, ಸದ್ಯಕ್ಕೆ ಡೇನಿಯಲ್ ಜತೆಗಾರ. ಇನ್ನಷ್ಟು ದಿನಗಳ ಕಾಲ ಅವರ ಜತೆಯಲ್ಲಿರುವ ಎಂದಿದ್ದಾಗಿ ಎನ್‍ಡಿಟಿವಿ ವರದಿ ಮಾಡಿದೆ. 100 ಹಾಗೂ 101ನೇ ಸಂಖ್ಯೆ ವಿಶೇಷವಾಗಿರುವುದರಿಂದ ಸೂಕ್ತ ಜೊತೆಗಾರ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಪೇಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


