ಕ್ರೀಡೆ

ಅನುಷ್ಕಾ ಶರ್ಮಾ ಮಾಡಿದ ತಪ್ಪಾದರೂ ಏನು?

ವಿಶ್ವಕಪ್ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅನುಷ್ಕಾ ಶರ್ಮಾ ಏನು ಮಾಡಿದ್ಳು? ಹೀಗೆ ಕೇಳಿದ್ದು ಬೇರ್ಯಾರೂ...

ಅನುಷ್ಕಾ ಶರ್ಮಾ ಮಾಡಿದ ತಪ್ಪಾದರೂ  ಏನು?
ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ
Published On :

ಸಿಡ್ನಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅನುಷ್ಕಾ ಶರ್ಮಾ ಏನು ಮಾಡಿದ್ಳು? ಹೀಗೆ ಕೇಳಿದ್ದು ಬೇರ್ಯಾರೂ ಅಲ್ಲ. ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ.  ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವಗೊಂಡಾಗ ಸಾಮಾಜಿಕ ತಾಣದಲ್ಲಿ ನೆಟಿಜನ್‌ಗಳು ಅನುಷ್ಕಾ ವಿರುದ್ಧ ಕಿಡಿ ಕಾರಿದ್ದರು.

ಟ್ವಿಟರ್‌ನಲ್ಲಿ ಅನುಷ್ಕಾ ಶರ್ಮಾಳನ್ನು ಬೈದು, ಜೋಕ್‌ಗಳನ್ನು ಸೃಷ್ಟಿಸಿ ಜನ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಲೇವಡಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಇದು ಜನರ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತಿದೆ ಎಂದಿದ್ದಾರೆ.

ಅಂದಹಾಗೆ ಅನುಷ್ಕಾ ಏನು ತಪ್ಪು ಮಾಡಿದ್ಳು? ಇನ್ನಿತರ ಆಟಗಾರರ ಕುಟುಂಬದವರಂತೆ ಅವಳು ಕೂಡಾ ಕ್ರಿಕೆಟ್ ನೋಡಲು ಹೋಗಿದ್ದಳು. ಕೊಹ್ಲಿಯ ನೀರಸ ಪ್ರದರ್ಶನಕ್ಕೆ ಅವಳನ್ನು ದೂರುವುದು ಯಾಕೆ? ಅನುಷ್ಕಾನನ್ನು ಟೀಕೆಗೊಳಪಡಿಸುವುದು ಜನರ ಅಪ್ರಬುದ್ಧತೆಯನ್ನು ತೋರಿಸುತ್ತದೆ.

ಇಬ್ಬರು ಪ್ರೀತಿ ಮಾಡುತ್ತಿದ್ದರೆ ಅದರಲ್ಲಿ ತಪ್ಪೇನಿದೆ? ಎಂದು ಗಂಗೂಲಿ ಪ್ರಶ್ನಿಸಿದ್ದಾರೆ.

ಪ್ರಸ್ತುತ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಭಾರತ 95 ರನ್‌ಗಳಿಗೆ ಪರಾಭವಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.