ವಿಶ್ವ ಹಾಕಿ ಲೀಗ್: ಭಾರತಕ್ಕೆ ಮತ್ತೊಂದು ಜಯ
ವಿಶ್ವ ಹಾಲಿ ಲೀಗ್‍ನ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತೊಂದು ಗೆಲವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರು ಪೋಲೆಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದರು...

ನವದೆಹಲಿ: ವಿಶ್ವ ಹಾಲಿ ಲೀಗ್‍ನ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತೊಂದು ಗೆಲವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರು ಪೋಲೆಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದರು.
ಪಂದ್ಯದ 13ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಅವರು ಭಾರತ ತಂಡಕ್ಕೆ ಮೊದಲ ಗೋಲು ತಂದಿತ್ತರು. ಇದಾದ ಮೇಲೆ, 26ನೇ ನಿಮಿಷದಲ್ಲಿ ಪೂನಮ್ ರಾಣಿ ಮತ್ತೊಂದು ದಾಖಲಿಸುವ ಮೂಲಕ ಎದುರಾಳಿಗಳ ವಿರುದ್ಧ ಭಾರತಕ್ಕೆ 2-0 ಗೋಲುಗಳ ಮುನ್ನಡೆ ತಂದುಕೊಟ್ಟರು. ಭಾರತೀಯ ವನಿತೆಯರು ಹೀಗೆ ತಮ್ಮ ಮೇಲೆ ಸಾಧಿಸಿದ ಪ್ರಭುತ್ವವನ್ನು ತೊಡೆದುಹಾಕುವಲ್ಲಿ ಎಡವಿದ ಪೋಲೆಂಡ್ ತಂಡದ ಆಟಗಾರ್ತಿಯರು ಯಾವುದೇ ಹಂತದಲ್ಲೂ ಭಾರತಕ್ಕೆ ಪ್ರತಿಸ್ಪರ್ಧೆ ನೀಡಲಿಲ್ಲ.
ಅಂತಿಮವಾಗಿ, ಪೋಲೆಂಡ್ ತಂಡ ಭಾರತದ ವಿರುದ್ಧ 0-2 ಗೋಲುಗಳ ಅಂತರದಿಂದ ಪರಾಭವ ಹೊಂದಿತು. ಶನಿವಾರ ನಡೆದಿದ್ದ ಪಂದ್ಯದಲ್ಲಿ ಘಾನಾ ತಂಡವನ್ನು 13-0 ಗೋಲುಗಳ ಭಾರೀ ಅಂತರದಿಂದ ಭಾರತ ತಂಡ ಮಣಿಸಿತ್ತು.
ಮಲೇಷ್ಯಾಕ್ಕೆ ಜಯ
ವಿಶ್ವ ಹಾಕಿ ಲೀಗ್‍ನ ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ ಮಹಿಳಾ ಹಾಕಿ ತಂಡ, ರಷ್ಯಾ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು.
ಪಂದ್ಯದ ಪ್ರತಿ ಹಂತದಲ್ಲೂ ಚುರುಕು ಆಟ ಪ್ರದರ್ಶಿಸಿದ ಮಲೇಷ್ಯಾ ತಂಡದ ಆಟಗಾರ್ತಿಯರು ಮೊದಲಾರ್ಧದಲ್ಲೇ 3 ಗೋಲು ದಾಖಲಿಸುವ ಮೂಲಕ ಎದುರಾಳಿಗಳ ವಿರುದ್ಧ ದೊಡ್ಡ ಮುನ್ನಡೆ ದಾಖಲಿಸಿದ್ದರು. ಪಂದ್ಯ ಮುಗಿಯುವವರೆಗೂ ಇದೇ ಮುನ್ನಡೆ ಕಾಯ್ದುಕೊಳ್ಳುವಲ್ಲ ಯಶಸ್ವಿಯಾದ ಅವರು, ಪಂದ್ಯದಲ್ಲಿ ಜಯ ದಾಖಲಿಸುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


